ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿ.ಟಿ. ಲಲಿತಾ ನಾಯಕ್‌ಗೆ ಹೊಸ ಜವಾಬ್ದಾರಿ
ಸಮಾಜವಾದಿ ಪಕ್ಷಕ್ಕೆ ಇತ್ತೀಚೆಗೆ ಸೇರ್ಪಡೆಯಾದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಸ್.ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿ, ಲಲಿತಾ ನಾಯಕ್‌ರವರ ಸೇರ್ಪಡೆಯಿಂದಾಗಿ ಪಕ್ಷದ ವರ್ಚಸ್ಸು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ವಿಧಾನಸಭಾ ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತೇ ಇನ್ನೂ ಗೊಂದಲಗಳಿವೆ. ತಾವು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಂತೂ ಖಚಿತ. ಶಿಕಾರಿಪುರ, ಭದ್ರಾವತಿ, ಸಾಗರ ಸೇರಿದಂತೆ ಅನೇಕ ಕಡೆಗಳಿಂದ ಸ್ಪರ್ಧಿಸುವಂತೆ ತಮಗೆ ಆಹ್ವಾನ ಬಂದಿದೆ. ಆದರೆ ಯಾವ ಕ್ಷೇತ್ರದಿಂದ ಸ್ಪರ್ಧಿಸುವುದು ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ ಎಂದು ಬಂಗಾರಪ್ಪ ನುಡಿದರು.

ಚುನಾವಣೆಯಲ್ಲಿ ಯಾವುದೇ ಪ್ರಮುಖ ರಾಜಕೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಬಂಗಾರಪ್ಪ, ಅಗತ್ಯ ಬಿದ್ದರೆ ರೈತಸಂಘದೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಮತ್ತಷ್ಟು
ಜೆಡಿಎಸ್ ನಿರ್ಮೂಲನೆ ಸುಲಭವಲ್ಲ: ದೇವೇಗೌಡ
ಅಧಿವೇಶನಗಳು ಜನವಿರೋಧಿ ಕೇಂದ್ರಗಳು: ಕೃಷ್ಣ
ಕರವೇ ಕಾರ್ಯಕರ್ತರಿಂದ ರೈಲು ನಿಲ್ದಾಣಕ್ಕೆ ಮುತ್ತಿಗೆ
ಪ್ರಕಾಶ್‌ ಪ್ರವೇಶಕ್ಕೆ ಅಡ್ಡಿಯಿಲ್ಲ : ಜನಾರ್ಧನ ರೆಡ್ಡಿ
ಕಬ್ಬಿಗೆ ಸೂಕ್ತ ಬೆಲೆ: ರಾಜಭವನಕ್ಕೆ ರೈತರಿಂದ ಮುತ್ತಿಗೆ
ಸ್ಪೋಟದ ಬೆದರಿಕೆ; ಇಂಜಿನಿಯರ್ ಬಂಧನ