ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರು ಉಪ ನೋಂದಣಿ ಕಚೇರಿ ವಿಭಜನೆ
ಸಾರ್ವಜನಿಕ ಸೇವೆ, ಆಡಳಿತದ ಹಿತದೃಷ್ಟಿಯಿಂದ ಮುದ್ರಾಂಕ ಇಲಾಖೆಯು ನಗರ ವ್ಯಾಪ್ತಿಯಲ್ಲಿ 6 ಉಪ ನೋಂದಣಿ ಕಚೇರಿಗಳನ್ನು ವಿಭಜಿಸಿ, ಒಟ್ಟು 15 ಉಪ ನೋಂದಣಿ ಕಚೇರಿ ಸೌಲಭ್ಯ ಕಲ್ಪಿಸಲು ಆದೇಶ ಹೊರಡಿಸಿದೆ.

ಜನರಿಗೆ ಅನುಕೂಲವಾಗುವಂತೆ ಕೈಗೊಳ್ಳಲಾದ ಈ ಕ್ರಮವು ಮಾರ್ಚ್ ಒಂದರಿಂದ ಜಾರಿಗೆ ಬರಲಿದ್ದು, ರಾಜಾಜಿನಗರ, ಜಯನಗರ, ಬಸವನಗುಡಿ, ಗಾಂಧಿನಗರ, ಶ್ರೀರಾಂಪುರ, ಶಿವಾಜಿನಗರಗಳ ಉಪ ನೋಂದಣಿ ಕಚೇರಿಗಳನ್ನು ವಿಭಜನೆಗೊಳಪಡಿಸಲಾಗುತ್ತದೆ. ಇದರಿಂದ ಹೆಚ್ಚುವರಿಯಾಗಿ 9 ಉಪ ನೋಂದಣಿ ಕಚೇರಿಗಳು ಲಭ್ಯವಾಗುತ್ತವೆ.

ಈ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ ರಾಜ್ಯ ನೋಂದಣಿ ಮಹಾ ಪರಿವೀಕ್ಷಕ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಎಚ್. ಶಶಿಧರ್, ಇದರಿಂದ ಪ್ರತಿಯೊಬ್ಬರಿಗೂ ಹತ್ತಿರದಲ್ಲಿಯೇ ನೋಂದಣಿ ಕಚೇರಿ ಸೌಲಭ್ಯ ದೊರೆತಂತಾಗುತ್ತದೆ. ಅಲ್ಲದೆ, ಕಚೇರಿಯಲ್ಲಿ ಕೆಲಸದ ಒತ್ತಡ ಕಡಿಮೆಯಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲು ಸಿಬ್ಬಂದಿಗಳಿಗೆ ಅನುಕೂಲವಾಗುತ್ತದೆ. ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ನೋಂದಣಿ ಕಚೇರಿ ವಿಭಜನೆಯಿಂದ ಹೊಸ ನೇಮಕಾತಿಯನ್ನು ಮಾಡಲಾಗುವುದಿಲ್ಲ. ಈಗಿರುವ ಸಿಬ್ಬಂದಿ, ಸಲಕರಣೆಗಳನ್ನು ಬಳಸಿಕೊಂಡೇ ಕಾರ್ಯ ನಿರ್ವಹಿಸಲಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೂ ಹೆಚ್ಚು ಹೊರೆಯಾಗುವುದಿಲ್ಲ ಎಂದು ಅವರು ತಿಳಿಸಿದರು.
ಮತ್ತಷ್ಟು
ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ನಾರಾಯಣ ಸ್ವಾಮಿ
ಬಿ.ಟಿ. ಲಲಿತಾ ನಾಯಕ್‌ಗೆ ಹೊಸ ಜವಾಬ್ದಾರಿ
ಜೆಡಿಎಸ್ ನಿರ್ಮೂಲನೆ ಸುಲಭವಲ್ಲ: ದೇವೇಗೌಡ
ಅಧಿವೇಶನಗಳು ಜನವಿರೋಧಿ ಕೇಂದ್ರಗಳು: ಕೃಷ್ಣ
ಕರವೇ ಕಾರ್ಯಕರ್ತರಿಂದ ರೈಲು ನಿಲ್ದಾಣಕ್ಕೆ ಮುತ್ತಿಗೆ
ಪ್ರಕಾಶ್‌ ಪ್ರವೇಶಕ್ಕೆ ಅಡ್ಡಿಯಿಲ್ಲ : ಜನಾರ್ಧನ ರೆಡ್ಡಿ