ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಮಕಾತಿ ವಿವಾದ : ಕೇಂದ್ರಕ್ಕೆ ಬಂಗಾರಪ್ಪ ಒತ್ತಾಯ
ರಾಜ್ಯ ರೈಲ್ವೆ ನೇಮಕಾತಿಯಲ್ಲಿ ನಡೆಯುತ್ತಿರುವ ಅನ್ಯಾಯವನ್ನು ತಡೆಯುವ ದೃಷ್ಟಿಯಿಂದ ಆಯಾ ಭಾಗದವರನ್ನು ಅಲ್ಲೇ ನೇಮಕ ಮಾಡಿಕೊಳ್ಳುವ ಸ್ಪಷ್ಟ ನೀತಿಯೊಂದನ್ನು ಸರ್ಕಾರ ರೂಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ಈ ಮೂಲಕ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರನ್ನು ನಿರ್ಲಕ್ಷಿಸಲಾಗುತ್ತಿದೆಯೆಂದು ರಾಜ್ಯವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಂಗಾರಪ್ಪ, ರಾಜ್ಯದಲ್ಲಿನ ರೈಲ್ವೆ ನೇಮಕಾತಿಯ ವಿವಾದದ ಕುರಿತು ಮುಂದಿನ ಸಂಸತ್ ಅಧಿವೇಶನದಲ್ಲಿ ರಾಜ್ಯದ ಸಂಸದರೆಲ್ಲ ಒಟ್ಟಾಗಿ ಸೇರಿ ಪ್ರಸ್ತಾಪಿಸಿ, ಹೊಸ ನೀತಿ ಜಾರಿಗೆ ಬರುವಂತೆ ಒತ್ತಡ ಹೇರಲಿದ್ದೇವೆ.

ಪ್ರಸ್ತುತ ರೈಲ್ವೆ ಇಲಾಖೆಯು ಸಂದರ್ಶನವನ್ನು ಮುಂದೂಡಿದರೆ ಸಾಲದು. ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಈ ಬಗ್ಗೆ ಹೋರಾಟ ನಡೆಸುತ್ತಿರುವ ಕನ್ನಡ ಪರ ಸಂಘಟನೆಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಬಂಗಾರಪ್ಪ ಅಧಿಕಾರದಲ್ಲಿದ್ದಾಗ ರೈತರ ಬಗ್ಗೆ ಕಾಳಜಿ ವಹಿಸದ ಬಿಜೆಪಿ ಈಗ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂಬ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಟೀಕಿಸಿದರು.
ಮತ್ತಷ್ಟು
ಆರು ಉಪ ನೋಂದಣಿ ಕಚೇರಿ ವಿಭಜನೆ
ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ನಾರಾಯಣ ಸ್ವಾಮಿ
ಬಿ.ಟಿ. ಲಲಿತಾ ನಾಯಕ್‌ಗೆ ಹೊಸ ಜವಾಬ್ದಾರಿ
ಜೆಡಿಎಸ್ ನಿರ್ಮೂಲನೆ ಸುಲಭವಲ್ಲ: ದೇವೇಗೌಡ
ಅಧಿವೇಶನಗಳು ಜನವಿರೋಧಿ ಕೇಂದ್ರಗಳು: ಕೃಷ್ಣ
ಕರವೇ ಕಾರ್ಯಕರ್ತರಿಂದ ರೈಲು ನಿಲ್ದಾಣಕ್ಕೆ ಮುತ್ತಿಗೆ