ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಂ.ಪಿ.ಪ್ರಕಾಶ್ ಬಿಜೆಪಿಗೆ ಸೇರುವರೇ?
NEWS ROOM
ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ರವರು ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಪ್ರಕಾಶ್ ಬಿಜೆಪಿ ಸೇರುವುದು ಬಹುತೇಕ ಖಚಿತವಾದಂತಾಗಿದೆ.

ಅಲ್ಲದೆ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಜತೆಯಲ್ಲಿಯೂ ಪ್ರಕಾಶ್ ಮಾತುಕತೆ ನಡೆಸಿದ್ದಾರೆ. ಆದರೆ ಪಕ್ಷ ಸೇರುವ ಬಗ್ಗೆ ಇನ್ನು ಪ್ರಕಟಣೆ ಹೊರಬಿದ್ದಿಲ್ಲ. ಮಾತುಕತೆ ವಿವರಗಳು ತಿಳಿದಿಲ್ಲವಾದರೂ, ಪ್ರಕಾಶ್ ಬಿಜೆಪಿ ಸೇರುವುದು ನಿಶ್ಚಿತ ಎಂದು ಕೆಲವು ಮೂಲಗಳು ತಿಳಿಸಿವೆ.

ಯಡಿಯೂರಪ್ಪನವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಪಿ. ಪ್ರಕಾಶ್, ಗುಜರಾತ್ ಫಲಿತಾಂಶದಿಂದ ರಾಜ್ಯದಲ್ಲಿ ಬಿಜೆಪಿಗೆ ಚುನಾವಣೆಯಲ್ಲಿ ಗೆಲ್ಲಲು ಒಳ್ಳೆಯ ಅವಕಾಶ ದೊರೆತಂತಾಗಿದೆ. ಯಡಿಯೂರಪ್ಪನವರು ತಮ್ಮನ್ನು ಬಿಜೆಪಿಗೆ ಬರಲು ಆಹ್ವಾನಿಸಿದ್ದಾರೆ. ಆದರೆ ತಮ್ಮ ಬಣದ ಇತರ ಶಾಸಕರೊಂದಿಗೆ ಚರ್ಚಿಸಿದ ಬಳಿಕವೇ ಅಂತಿಮ ತೀರ್ಮಾನವನ್ನು ಪ್ರಕಟಿಸುವುದಾಗಿ ತಿಳಿಸಿದರು.

ಈಗಾಗಲೇ ಕೆಲವು ಶಾಸಕರು ಕಾಂಗ್ರೆಸ್‌ನತ್ತ ಮುಖ ಮಾಡಿದರೆ, ಇನ್ನೂ ಕೆಲವರು ಬಿಜೆಪಿ ಸೇರುವ ಬಗ್ಗೆ ಒಲವು ವ್ಯಕ್ತಪಡಿಸಿರುವುದರಿಂದ ಸಂಕ್ರಾಂತಿ ಬಳಿಕವಷ್ಟೇ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಗಳಿವೆ. ಈ ಮಾತುಕತೆ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಡಿ.ಎಸ್. ಶಂಕರಮೂರ್ತಿಯವರು ಪಾಲ್ಗೊಂಡಿದ್ದರು.
ಮತ್ತಷ್ಟು
ನೇಮಕಾತಿ ವಿವಾದ : ಕೇಂದ್ರಕ್ಕೆ ಬಂಗಾರಪ್ಪ ಒತ್ತಾಯ
ಆರು ಉಪ ನೋಂದಣಿ ಕಚೇರಿ ವಿಭಜನೆ
ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ನಾರಾಯಣ ಸ್ವಾಮಿ
ಬಿ.ಟಿ. ಲಲಿತಾ ನಾಯಕ್‌ಗೆ ಹೊಸ ಜವಾಬ್ದಾರಿ
ಜೆಡಿಎಸ್ ನಿರ್ಮೂಲನೆ ಸುಲಭವಲ್ಲ: ದೇವೇಗೌಡ
ಅಧಿವೇಶನಗಳು ಜನವಿರೋಧಿ ಕೇಂದ್ರಗಳು: ಕೃಷ್ಣ