ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಹೇಳಿಕೆ ವಿರುದ್ಧ ಧರಂ ಗರಂ
NEWS ROOM
ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳಿಗೇನು ಕಮ್ಮಿಯಿರುವುದಿಲ್ಲ. ಈಗ ಬಿಜೆಪಿ ಹೇಳಿಕೆಯ ವಿರುದ್ಧ ಕಿಡಿಕಾರಿದವರು ಮಾಜಿ ಮುಖ್ಯಮಂತ್ರಿ ಧರಂ ಸಿಂಗ್. ರಾಜಭವನವನ್ನು ಕಾಂಗ್ರೆಸ್ ಭವನವನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂಬ ಬಿಜೆಪಿ ಹೇಳಿಕೆಗೆ ಧರಂ ಕಿಡಿಕಾರಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಧರಂಸಿಂಗ್, ರಾಜಭವನವನ್ನು ಕಾಂಗ್ರೆಸ್ ಭವನವನ್ನಾಗಿ ಮಾಡಬೇಕೆಂದು ಆಸೆ ಪಟ್ಟಿಲ್ಲ. ಅಂತಹ ಪ್ರಯತ್ನವನ್ನು ಕೂಡ ಮಾಡಿಲ್ಲ. ಬಿಜೆಪಿ ಉದ್ದೇಶಪೂರ್ವಕವಾಗಿಯೇ ಇಂತಹ ಟೀಕೆಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.

ಚುನಾವಣೆ ಮುಂದೂಡುವ ಪ್ರಯತ್ನಕ್ಕಾಗಿ ನಾವಾಗಲಿ, ಕೇಂದ್ರ ಸರ್ಕಾರವಾಗಲಿ ಕೈ ಹಾಕಿಲ್ಲ. ಚುನಾವಣೆ ದಿನಾಂಕ ನಿಗದಿ ಮಾಡುವುದು ಚುನಾವಣಾ ಆಯೋಗಕ್ಕೆ ಬಿಟ್ಟಿದ್ದು ಎಂದು ಅವರು, ಚುನಾವಣೆಗೆ ಈಗಾಗಲೇ ಪಕ್ಷ ಸಿದ್ದವಾಗಿದೆ ಎಂದು ತಿಳಿಸಿದರು.

ಚುನಾವಣೆ ಆಯೋಗವು ಒಂದು ಸ್ವಾಯತ್ತ ಸಂಸ್ಥೆ. ಅದರ ಕಾರ್ಯವೈಖರಿಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಇಂತಹ ಸಾಮಾನ್ಯ ಜ್ಞಾನ ಬಿಜೆಪಿಗೆ ಇಲ್ಲದಿರುವುದು ಆಶ್ಚರ್ಯವಾಗಿದೆ ಎಂದು ಅವರು ತಿಳಿಸಿದರು.
ಮತ್ತಷ್ಟು
ಎಂ.ಪಿ.ಪ್ರಕಾಶ್ ಬಿಜೆಪಿಗೆ ಸೇರುವರೇ?
ನೇಮಕಾತಿ ವಿವಾದ : ಕೇಂದ್ರಕ್ಕೆ ಬಂಗಾರಪ್ಪ ಒತ್ತಾಯ
ಆರು ಉಪ ನೋಂದಣಿ ಕಚೇರಿ ವಿಭಜನೆ
ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ನಾರಾಯಣ ಸ್ವಾಮಿ
ಬಿ.ಟಿ. ಲಲಿತಾ ನಾಯಕ್‌ಗೆ ಹೊಸ ಜವಾಬ್ದಾರಿ
ಜೆಡಿಎಸ್ ನಿರ್ಮೂಲನೆ ಸುಲಭವಲ್ಲ: ದೇವೇಗೌಡ