ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಸ್ಕಾಂನಿಂದ ವಿದ್ಯುತ್ ದರ ಇಳಿಕೆ
ಆಶ್ಚರ್ಯವಾದರೂ ಸತ್ಯ. ಸಂಕ್ರಾತಿ ಸಂಭ್ರಮದ ನಡುವೆ ವಿದ್ಯುತ್ ಬಳಕೆದಾರರಿಗೆ ಕೊಂಚ ನಿರಾಳವಾಗಿರಬಹುದು. ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ(ಬೆಸ್ಕಾಂ)ಯು ವಿದ್ಯುತ್ ದರವನ್ನು ಸ್ವಲ್ಪಮಟ್ಟಿಗೆ ಇಳಿಸಿದೆ.

ರಾಜ್ಯ ಜಲಾಶಯಗಳಲ್ಲಿ ನೀರಿನ ಶೇಖರಣೆ ಉತ್ತಮವಾಗಿದ್ದು ಮತ್ತು ಬೆಸ್ಕಾಂನಲ್ಲಿ ಹೆಚ್ಚುವರಿ ಹಣ ಇರುವ ಹಿನ್ನೆಲೆಯಲ್ಲಿ ಎಲ್ಲ ಗ್ರಾಹಕರಿಗೆ ಪ್ರತಿ ಯೂನಿಟ್ಗೆ 27 ಪೈಸೆಯಷ್ಟು ಕಡಿಮೆ ಮಾಡಲಾಗಿದೆ.

ಈ ದರವು ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಅನ್ವಯವಾಗಲಿದೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ) ಆದೇಶ ಹೊರಡಿಸಿದೆ. ಪರಿಷ್ಕೃತ ದರವು ಫೆಬ್ರವರಿ ಒಂದರಿಂದ ಜಾರಿಗೆ ಬರಲಿದೆ.

ಪ್ರಸ್ತುತ ಜಾರಿಯಲ್ಲಿರುವ ವಿದ್ಯುತ್ ಪ್ರತಿ ಯೂನಿಟ್‌ಗೆ 3.56 ಪೈಸೆ ಇದ್ದು. ಹೊಸ ನಿಯಮದಂತೆ ಪ್ರತಿ ಯೂನಿಟ್‌ಗೆ 3.29ಪೈಸೆ ನಿಗದಿ ಮಾಡಲಾಗಿದೆ. ಈ ಮೂಲಕ ದರ ಇಳಿಸಿರುವ ಕೆಇಆರ್‌ಸಿಯು 2008-09ನೇ ಹಣಕಾಸು ವರ್ಷದಲ್ಲಿ ಪ್ರತಿ ಯೂನಿಟ್‌ಗೆ3.63ಪೈಸೆ ಹಾಗೂ 2009-10ನೇ ಹಣಕಾಸು ವರ್ಷಕ್ಕೆ 3.76 ಪೈಸೆ ನಿಗದಿ ಮಾಡುವ ಮೂಲಕ ಜಾಣ್ಮೆ ಪ್ರದರ್ಶಿಸಿದೆ.

ಆಯೋಗದ ಈ ತೀರ್ಮಾನದಿಂದ ಪ್ರಸಕ್ತ ಸಾಲಿನಲ್ಲಿ ಬೆಸ್ಕಾಂನ ಆದಾಯದಲ್ಲಿ 257ಕೋಟಿ ರೂಪಾಯಿ ಇಳಿಕೆಯಾಗಲಿದೆ ಎಂದು ಅಂದಾಜು ಮಾಡಲಾಗಿದೆ. ದರ ಪರಿಷ್ಕರಣೆಯಿಂದ ನೀರಾವರಿ ಕೃಷಿ ಪಂಪ್‌ಸೆಟ್ ಅಲ್ಲದೆ, ಗೃಹ ಬಳಕೆ, ವಾಣಿಜ್ಯ, ಬೃಹತ್ ಮತ್ತು ಸಣ್ಣ ಕೈಗಾರಿಕೆ ಬಳಕೆದಾರರಿಗೆ ಅನುಕೂಲವಾಗಲಿದೆ. ಮುಖ್ಯವಾಗಿ ಕೃಷಿ ಪಂಪ‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಮತ್ತಷ್ಟು
ಬಸವರಾಜ್‌ರಿಂದ ತೇಜೋವಧೆ: ಮೆರಾಜುದ್ದೀನ್
ಎಲ್ಲ ಜಿಲ್ಲೆಗಳಲ್ಲೂ ಕಾನೂನು ಸಾಕ್ಷರತೆ: ಗೋಪಾಲಗೌಡ
ಧರ್ಮದ ಹೆಸರಿನಲ್ಲಿ ದೇಶದ ನಾಶ: ದೇವೇಗೌಡ
ಬಿಜೆಪಿ ಹೇಳಿಕೆ ವಿರುದ್ಧ ಧರಂ ಗರಂ
ಎಂ.ಪಿ.ಪ್ರಕಾಶ್ ಬಿಜೆಪಿಗೆ ಸೇರುವರೇ?
ನೇಮಕಾತಿ ವಿವಾದ : ಕೇಂದ್ರಕ್ಕೆ ಬಂಗಾರಪ್ಪ ಒತ್ತಾಯ