ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಪೀಡ್ ಗವರ್ನರ್ ಅಳವಡಿಕೆ ಖಂಡಿಸಿ ಲಾರಿ ಮುಷ್ಕರ
ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸುವುದನ್ನು ಖಂಡಿಸಿ ಸರಕು ಸಾಗಣಿಕೆ ವಾಹನಗಳು, ಮ್ಯಾಕ್ಸಿ ಕ್ಯಾಬ್, ಬಸ್ ಸೇರಿದಂತೆ ಬಾಡಿಗೆ ವಾಹನಗಳು ಜನವರಿ 20 ಮಧ್ಯರಾತ್ರಿಯಿಂದ ಅನಿರ್ದಿಷ್ಟವಾಧಿವರೆಗೆ ಬಂದ್ ಮಾಡಲು ತೀರ್ಮಾನಿಸಿದೆ.

ನಗರದಲ್ಲಿ ನಡೆದ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇದರಿಂದ ಹಾಲು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಅಭಾವ ಎದುರಿಸುವ ಸಾಧ್ಯತೆಗಳಿವೆ.

ಸಭೆಯ ಬಳಿಕ ಮಾತನಾಡಿದ ಲಾರಿ ಓನರ್ಸ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಸ್ಪೀಡ್ ಗವರ್ನರ್ ಅಳವಡಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ಬರಬೇಕು. ಆದರೆ ಇದು ರಾಜ್ಯದಲ್ಲಿ ಮಾತ್ರ ಜಾರಿಗೆ ಬಂದಿದೆ. ಇತರೆ ರಾಜ್ಯಗಳಲ್ಲಿ ಇಲ್ಲದ ಕಾನೂನು ನಮ್ಮ ರಾಜ್ಯದಲ್ಲಿ ಮಾತ್ರ ಏಕೆ ಎಂದು ಪ್ರಶ್ನಿಸಿದರು.

ಈ ಆದೇಶದಿಂದ ದಿನಬಳಕೆ ವಸ್ತುಗಳನ್ನು ಸೂಕ್ತ ಸಮಯಕ್ಕೆ ತಲುಪಿಸುವುದು ಕಷ್ಟವಾಗುತ್ತದೆ. ಅಲ್ಲದೆ, ಇದರಿಂದ ಹೆಚ್ಚು ಸಮಯ ಮತ್ತು ಇಂಧನ ವ್ಯಯವಾಗುತ್ತದೆ. ಇದಕ್ಕಾಗಿ ಸುಮಾರು 18ಸಾವಿರ ರೂಪಾಯಿ ವೆಚ್ಚವನ್ನು ಭರಿಸಬೇಕಾಗುತ್ತದೆ ಎಂದು ಹೇಳಿದರು.

ಸ್ಪೀಡ್ ಗವರ್ನರ್ ಅಳವಡಿಕೆ ಜವಾಬ್ದಾರಿ ಮಾಲಿಕರದ್ದಲ್ಲ. ಅದನ್ನು ವಾಹನ ತಯಾರಕರದ್ದು ಎಂದು ವಾದಿಸಿದ ಷಣ್ಮುಗಪ್ಪ ಈ ಎಲ್ಲಾ ಸಮಸ್ಯೆಗಳ ಹಿನ್ನೆಲೆಯಲ್ಲಿ ಸ್ಪೀಡ್ ಗವರ್ನರ್ ಅಳವಡಿಕೆ ಕುರಿತ ತೀರ್ಪನ್ನು ಪರೀಶೀಲಿಸಬೇಕೆಂದು ಮನವಿ ಮಾಡಲಾಗಿದೆ.

ಈ ಬಗ್ಗೆ ಸರ್ಕಾರಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಜನವರಿ 20 ಮಧ್ಯರಾತ್ರಿಯಿಂದ ಖಾಸಗಿ ವಾಹನಗಳ ಸಾರಿಗೆ ವ್ಯವಸ್ಥೆಯನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಪ್ರಕಟಿಸಿದರು.
ಮತ್ತಷ್ಟು
ಬೆಸ್ಕಾಂನಿಂದ ವಿದ್ಯುತ್ ದರ ಇಳಿಕೆ
ಬಸವರಾಜ್‌ರಿಂದ ತೇಜೋವಧೆ: ಮೆರಾಜುದ್ದೀನ್
ಎಲ್ಲ ಜಿಲ್ಲೆಗಳಲ್ಲೂ ಕಾನೂನು ಸಾಕ್ಷರತೆ: ಗೋಪಾಲಗೌಡ
ಧರ್ಮದ ಹೆಸರಿನಲ್ಲಿ ದೇಶದ ನಾಶ: ದೇವೇಗೌಡ
ಬಿಜೆಪಿ ಹೇಳಿಕೆ ವಿರುದ್ಧ ಧರಂ ಗರಂ
ಎಂ.ಪಿ.ಪ್ರಕಾಶ್ ಬಿಜೆಪಿಗೆ ಸೇರುವರೇ?