ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರ್ಯಾಯ ವಿವಾದ : ಜಟಿಲಗೊಂಡ ಸಮಸ್ಯೆ
ವಿದೇಶ ಯಾತ್ರೆ ಮಾಡಿರುವ ಪುತ್ತಿಗೆ ಶ್ರೀಗಳು ಕೃಷ್ಣಪೂಜೆಗೆ ಅರ್ಹರೇ ಎಂಬ ವಾದ ವಿವಾದ ದಿನದಿನಕ್ಕೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದ್ದು, ಒಂದು ಮಹತ್ವದ ಬೆಳವಣಿಗೆಯಲ್ಲಿ ವಿದೇಶ ಪ್ರವಾಸ ಮಾಡಿರುವುದರಿಂದ ಪುತ್ತಿಗೆ ಶ್ರೀಗಳು ಕೃಷ್ಣನ ಪೂಜೆಯಷ್ಟೇ ಅಲ್ಲ, ಪೀಠಾರೋಹಣವನ್ನು ಮಾಡಲು ಅರ್ಹರಲ್ಲ ಎಂದು ವಿದ್ವಾಂಸರ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ 24 ಮಾಧ್ವ ಮಠಗಳ 50 ವಿದ್ವಾಂಸರು ಎರಡು ದಿನಗಳ ಕಾಲ ನಡೆಸಿದ ಮಹತ್ವದ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಯಿತು.

ಪುತ್ತಿಗೆ ಶ್ರೀಗಳಾದ ಸುಗುಣೇಂದ್ರ ತೀರ್ಥರು ಮಾಡಿರುವ ವಿದೇಶಯಾತ್ರೆಗೆ ಪರಿಹಾರವಿಲ್ಲ. ಆದರೆ ಅವರು ಶಿಷ್ಯನನ್ನು ಸ್ವೀಕರಿಸಿ ಅವರ ಮೂಲಕ ಪೂಜೆಯನ್ನು ನಡೆಸಬಹುದು. ತಾವು ಕೃಷ್ಣ ದೇವಾಲಯದ ಆಡಳಿತವನ್ನು ನೋಡಿಕೊಳ್ಳಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ವಾಂಸರು, ಹಾಗೊಮ್ಮೆ ಈ ತೀರ್ಮಾನಕ್ಕೆ ವಿರುದ್ಧವಾಗಿ ನಡೆದರೆ ಅಸಹಕಾರದ ಬೆದರಿಕೆಯನ್ನು ಒಡ್ಡಿದ್ದಾರೆ.

ಸಭೆಯಲ್ಲಿ ಕೈಗೊಳ್ಳಲಾಗಿರುವ ತೀರ್ಮಾನವೇ ಅಂತಿಮವಾಗಿದ್ದು, ಈ ನಿರ್ಣಯಗಳನ್ನು ಪೇಜಾವರ ಶ್ರೀಗಳಿಗೆ ಮತ್ತು ಪುತ್ತಿಗೆ ಶ್ರೀಗಳಿಗೂ ತಿಳಿಸಲಾಗುವುದು ಎಂದು ಅವರುಗಳು ತಿಳಿಸಿದರು. ಈ ಬಗ್ಗೆ ಪೇಜಾವರ ಶ್ರೀಗಳು ವಿದ್ವಾಂಸರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿದ್ದು, ನಾಳೆ ಮಧ್ಯಂತರ ಹೇಳಿಕೆ ಹೊರಬೀಳಲಿದೆ. ಆದರೆ ವಿದ್ವಾಂಸರು ನ್ಯಾಯಾಲಯದ ತೀರ್ಪು ಏನೇ ಇದ್ದರೂ, ಅದನ್ನು ಅನುಷ್ಠಾನಕ್ಕೆ ತರಲಾಗುವುದಿಲ್ಲ. ಧರ್ಮಶಾಸ್ತ್ರದ ಪ್ರಕಾರವೇ ಕೃಷ್ಣಪೂಜೆ ನಡೆಯಲಿದೆ ಎಂದು ವಿದ್ವಾಂಸರು ಹೇಳಿದ್ದಾರೆ.
ಮತ್ತಷ್ಟು
ಸ್ಪೀಡ್ ಗವರ್ನರ್ ಅಳವಡಿಕೆ ಖಂಡಿಸಿ ಲಾರಿ ಮುಷ್ಕರ
ಬೆಸ್ಕಾಂನಿಂದ ವಿದ್ಯುತ್ ದರ ಇಳಿಕೆ
ಬಸವರಾಜ್‌ರಿಂದ ತೇಜೋವಧೆ: ಮೆರಾಜುದ್ದೀನ್
ಎಲ್ಲ ಜಿಲ್ಲೆಗಳಲ್ಲೂ ಕಾನೂನು ಸಾಕ್ಷರತೆ: ಗೋಪಾಲಗೌಡ
ಧರ್ಮದ ಹೆಸರಿನಲ್ಲಿ ದೇಶದ ನಾಶ: ದೇವೇಗೌಡ
ಬಿಜೆಪಿ ಹೇಳಿಕೆ ವಿರುದ್ಧ ಧರಂ ಗರಂ