ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಲ ಬಂದಾಗ ಸೂಕ್ತ ನಿರ್ಧಾರ:ಎಸ್.ಎಂ.ಕೃಷ್ಣ
ಚುನಾವಣಾ ಆಯೋಗವು ಚುನಾವಣೆಯ ದಿನಾಂಕವನ್ನು ಸ್ಪಷ್ಟಪಡಿಸಿ ವಾಪಸ್ಸಾಗಿರುವ ಬೆನ್ನಲ್ಲೆ ಮಾಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಅವರು ನಗರಕ್ಕೆ ಭೇಟಿ ನೀಡಿದ್ದು, ಮತ್ತೆ ರಾಜ್ಯ ರಾಜಕೀಯಕ್ಕೆ ಮರಳುವರೇ ಎಂಬ ಬಗ್ಗೆ ಊಹಾಪೋಹಗಳು ಎದ್ದಿವೆ.

ಎಸ್.ಎಂ.ಕೃಷ್ಣರವರು ಒಂದು ಮಹತ್ವದ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನು ಪ್ರಕಟಿಸುವುದಾಗಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದರು.

ಪ್ರಸ್ತುತ ರಾಜ್ಯಪಾಲನಾಗಿಯೇ ಮುಂದುವರೆಯುತ್ತಿದ್ದೇನೆ. ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರು ನನ್ನ ಆಗಮನಕ್ಕೆ ಕಾತರರಾಗಿದ್ದಾರೆ. ಕಾಲ ಬಂದಾಗ ಅದರ ಬಗ್ಗೆ ಸೂಕ್ತ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದರು. ಆದರೆ ಕೆಲವು ಮೂಲಗಳ ಪ್ರಕಾರ ಕೃಷ್ಣ ಅವರು ವಿಧಾನಸಭೆಯ ಚುನಾವಣೆಯ ಮೊದಲೇ ರಾಜ್ಯ ರಾಜ್ಯಕೀಯಕ್ಕೆ ಪ್ರವೇಶಿಸುವರು ಎಂದು ತಿಳಿದು ಬಂದಿದೆ.

ಪ್ರಸ್ತುತ ರಾಜ್ಯದಲ್ಲಿ ಕೆಪಿಸಿಸಿ ಪುನರ್‌ವಿಂಗಡಣೆಯಾಗಬೇಕಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವಂತಹ ನಾಯಕನ ಅಗತ್ಯವಿರುವ ಹಿನ್ನೆಲೆಯಲ್ಲಿ ಎಸ್.ಎಂ. ಕೃಷ್ಣ ಆಗಮನ ಕುತೂಹಲ ಮೂಡಿಸಿದೆ. ಇನ್ನು ಮಲ್ಲಿಕಾರ್ಜುನರವರನ್ನು ಈ ಬಗ್ಗೆ ಕೇಳಿದರೆ, ಎಸ್.ಎಂ ಕೃಷ್ಣ ರಾಜ್ಯ ರಾಜಕೀಯಕ್ಕೆ ಮರಳುವ ವಿಚಾರವನ್ನು ಇದುವರೆಗೂ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಿಲ್ಲ ಎಂದು ಮಾತು ಹಾರಿಸಿದರು.
ಮತ್ತಷ್ಟು
ಪರ್ಯಾಯ ವಿವಾದ : ಜಟಿಲಗೊಂಡ ಸಮಸ್ಯೆ
ಸ್ಪೀಡ್ ಗವರ್ನರ್ ಅಳವಡಿಕೆ ಖಂಡಿಸಿ ಲಾರಿ ಮುಷ್ಕರ
ಬೆಸ್ಕಾಂನಿಂದ ವಿದ್ಯುತ್ ದರ ಇಳಿಕೆ
ಬಸವರಾಜ್‌ರಿಂದ ತೇಜೋವಧೆ: ಮೆರಾಜುದ್ದೀನ್
ಎಲ್ಲ ಜಿಲ್ಲೆಗಳಲ್ಲೂ ಕಾನೂನು ಸಾಕ್ಷರತೆ: ಗೋಪಾಲಗೌಡ
ಧರ್ಮದ ಹೆಸರಿನಲ್ಲಿ ದೇಶದ ನಾಶ: ದೇವೇಗೌಡ