ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅತ್ತಲೋ ಇತ್ತಲೋ... ಪ್ರಕಾಶ್ ಬಣದ ಮುಗಿಯದ ಗೊಂದಲ
ಯಾವ ಪಕ್ಷ ಸೇರಬೇಕು ಎಂಬ ಬಗ್ಗೆ ತೀವ್ರ ಗೊಂದಲದಲ್ಲಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಬಣವು, ಬಿಜೆಪಿಯತ್ತಲೇ ಹೆಚ್ಚು ಒಲವು ತೋರುತ್ತಿದ್ದು, ಈ ಕುರಿತು ಸ್ಪಷ್ಟ ನಿರ್ಧಾರ ವಿಳಂಬವಾಗುವ ಸಾಧ್ಯತೆಗಳಿವೆ.

ಕ್ಷೇತ್ರ ಪುನರ್ವಿಂಗಡಣೆಯಾದ ಬಳಿಕ ವಿಧಾನಸಭಾ ಚುನಾವಣೆಗಳು ನಡೆದರೆ ರಾಜಕೀಯ ಸ್ಥಿತಿಗತಿಯಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಆತುರದಲ್ಲಿ ಯಾವುದೇ ಪಕ್ಷಗಳನ್ನು ಸೇರುವ ನಿರ್ಧಾರ ಅಗತ್ಯವಿಲ್ಲ ಎಂಬುದು ಬಣದ ಮಾಜಿ ಶಾಸಕರ ಅಭಿಪ್ರಾಯವಾಗಿದೆ.

ಪ್ರಕಾಶ್ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಜತೆಯಲ್ಲಿ ಚರ್ಚಿಸಿದ್ದಾರೆ. ಚರ್ಚೆಯ ವಿವರಗಳನ್ನು ತಮ್ಮ ಬಣದ ಶಾಸಕರಿಗೆ ಈ ತಿಂಗಳ 17ರಂದು ನಡೆಯುವ ಸಭೆಯಲ್ಲಿ ವಿವರಿಸಲಿದ್ದಾರೆ. ಪ್ರಕಾಶ್ ಕಾಂಗ್ರೆಸ್‌ನ ಆಸ್ಕರ್ ಫರ್ನಾಂಡಿಸ್, ಸಿದ್ದರಾಮಯ್ಯ, ಬಿಜೆಪಿಯ ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡ ಅವರ ಜೊತೆಯಲ್ಲಿ ನಡೆಸಿದ ಮಾತುಕತೆಯ ವಿವರಗಳನ್ನು ಸಭೆಯಲ್ಲಿ ಮಂಡಿಸುವ ಸಾಧ್ಯತೆಗಳಿವೆ. ಯಾವ ಪಕ್ಷವನ್ನು ಸೇರಬೇಕೆನ್ನುವ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಬಣದ ಶಾಸಕರು ಪ್ರಕಾಶ್‌ಗೆ ವಹಿಸಿದ್ದಾರೆ.

ಅಲ್ಲದೆ, ಪ್ರಕಾಶ್ ಜತೆಯಲ್ಲಿ ಸುಮಾರು 12 ಮಾಜಿ ಶಾಸಕರಲ್ಲಿ ಕೆಲವರು ಕಾಂಗ್ರೆಸ್‌ನತ್ತ ಮುಖ ಮಾಡಿದರೆ, ಇನ್ನು ಕೆಲವರು ಬಿಜೆಪಿ ಸೇರುವ ಆಶಯವನ್ನು ವ್ಯಕ್ತಪಡಿಸಿರುವುದರಿಂದ ಅಂತಿಮ ನಿರ್ಧಾರ ಇನ್ನು ವಿಳಂಬವಾಗುವ ಸಾಧ್ಯತೆಗಳಿವೆ.
ಮತ್ತಷ್ಟು
ಕಾಲ ಬಂದಾಗ ಸೂಕ್ತ ನಿರ್ಧಾರ:ಎಸ್.ಎಂ.ಕೃಷ್ಣ
ಪರ್ಯಾಯ ವಿವಾದ : ಜಟಿಲಗೊಂಡ ಸಮಸ್ಯೆ
ಸ್ಪೀಡ್ ಗವರ್ನರ್ ಅಳವಡಿಕೆ ಖಂಡಿಸಿ ಲಾರಿ ಮುಷ್ಕರ
ಬೆಸ್ಕಾಂನಿಂದ ವಿದ್ಯುತ್ ದರ ಇಳಿಕೆ
ಬಸವರಾಜ್‌ರಿಂದ ತೇಜೋವಧೆ: ಮೆರಾಜುದ್ದೀನ್
ಎಲ್ಲ ಜಿಲ್ಲೆಗಳಲ್ಲೂ ಕಾನೂನು ಸಾಕ್ಷರತೆ: ಗೋಪಾಲಗೌಡ