ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲರು, ಕಮ್ಯೂನಿಸ್ಟರು ಪ್ರಗತಿಯ ಶತ್ರುಗಳು: ಶ್ರೀಶ್ರೀ
ಕಮ್ಯೂನಿಸ್ಟರು ಮತ್ತು ನಕ್ಸಲೀಯರು ದೇಶಕ್ಕೆ ಬಹಳ ಅಪಾಯಕಾರಿಯಾಗಿದ್ದು, ಅವರು ಪ್ರಗತಿ ವಿರೋಧಿಗಳು ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರದ 212 ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿದೆ. ಧರ್ಮ ದ್ವೇಷಿಗಳಾಗಿರುವ ಇವರು ದೇಶದ ಅಭಿವೃದ್ಧಿ ವಿರೋಧಿಗಳು. ಇಂತಹ ಕ್ರಾಂತಿಯಲ್ಲಿ ಶೇ. 99ರಷ್ಟು ಹಿಂದೂಗಳಿರುವುದು ದುರದೃಷ್ಟಕರ. ಇಂತಹ ಪ್ರದೇಶಗಳಲ್ಲಿ ಮಕ್ಕಳಿಗೆ ಸೂಕ್ತ ಶಿಕ್ಷಣ ಕೂಡ ಲಭ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದರು.

ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಅವರ "ಅಪಾರ್ಥ, ಆಕ್ರಮಣಗಳಿಗೆ ಒಳಗಾಗಿರುವ ಹಿಂದು ಧರ್ಮ" ಹಾಗೂ ಪಾಂಚಜನ್ಯ ಸಂಪಾದಕ ತರುಣ್ ವಿಜಯ್ ಅವರ "ಸೇಫ್ರನ್ ಸರ್ಜ್" ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಮ್ಯೂನಿಸ್ಟರ ಜೊತೆ ಸರಕಾರವನ್ನು ರಚಿಸಿರುವವರ ಬಗ್ಗೆ ಮರುಕ ಹುಟ್ಟುತ್ತದೆ. ಪಾಂಡಿತ್ಯದ ಬಗ್ಗೆ ಮಾತನಾಡುವ ಪ್ರಧಾನಿ ಸಾಧು, ಸಂತರ ಕುರಿತು ಒಮ್ಮೆಯೂ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಮಾಜಿ ರಾಜ್ಯಪಾಲ ನ್ಯಾ.ಎಂ. ರಾಮಾಜೋಯಿಸ್ ಮಾತನಾಡಿ, ಭಾರತದ್ದು ಖಾವಿ ಸಂಸ್ಕೃತಿ. ಮುಸ್ಲಿಂ ಮತ್ತು ಇಂಗ್ಲಿಷರ ಆಕ್ರಮಣದ ನಡುವೆಯೂ ಹಿಂದೂ ಸಂಸ್ಕೃತಿ ಗಟ್ಟಿಯಾಗಿ ಬೇರೂರಿದೆ. ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕಬೇಕು ಎಂಬುದು ಹಿಂದು ಧರ್ಮದ ಮುಖ್ಯ ತತ್ವ ಎಂದರು.
ಮತ್ತಷ್ಟು
ಅತ್ತಲೋ ಇತ್ತಲೋ... ಪ್ರಕಾಶ್ ಬಣದ ಮುಗಿಯದ ಗೊಂದಲ
ಕಾಲ ಬಂದಾಗ ಸೂಕ್ತ ನಿರ್ಧಾರ:ಎಸ್.ಎಂ.ಕೃಷ್ಣ
ಪರ್ಯಾಯ ವಿವಾದ : ಜಟಿಲಗೊಂಡ ಸಮಸ್ಯೆ
ಸ್ಪೀಡ್ ಗವರ್ನರ್ ಅಳವಡಿಕೆ ಖಂಡಿಸಿ ಲಾರಿ ಮುಷ್ಕರ
ಬೆಸ್ಕಾಂನಿಂದ ವಿದ್ಯುತ್ ದರ ಇಳಿಕೆ
ಬಸವರಾಜ್‌ರಿಂದ ತೇಜೋವಧೆ: ಮೆರಾಜುದ್ದೀನ್