ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಲೇಜಿಗೆ ಹುಸಿಬಾಂಬ್ ಕರೆ ಸೃಷ್ಟಿಸಿದ ಆತಂಕ
ಜಯನಗರದಲ್ಲಿರುವ ವಿಜಯ ಕಾಲೇಜಿಗೆ ಬಂದ ಹುಸಿ ಬಾಂಬ್ ಕರೆಯಿಂದಾಗಿ ಕಾಲೇಜಿನಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.ಕಾಲೇಜಿನ ಕಚೇರಿಗೆ ಯುವತಿಯೊಬ್ಬಳು ದೂರವಾಣಿ ಕರೆ ಮಾಡಿ ಕಾಲೇಜಿಗೆ ಬಾಂಬ್ ಇಡಲಾಗಿದೆ. ಅದು ಇಷ್ಟರಲ್ಲೆ ಸ್ಫೋಟಗೊಳ್ಳಲಿದೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಳು. ಇದರಿಂದ ಭಯಭೀತರಾದ ಸಿಬ್ಬಂದಿ ವರ್ಗದವರು ಪೊಲೀಸರಿಗೆ ವಿಷಯ ತಿಳಿಸಿದರು.

ಶ್ವಾನದಳ ಹಾಗೂ ಬಾಂಬ್ ನಿಷ್ಕ್ತ್ರಿಯದಳದೊಂದಿಗೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದರು. ಕಾಲೇಜಿನ ಆವರಣದಲ್ಲಿ ವ್ಯಾಪಕ ಶೋಧನೆ ನಡೆಸಲಾಯಿತು. ಪೂರ್ಣವಾಗಿ ಶೋಧಿಸಿದ ಬಳಿಕ ಇದು ಹುಸಿ ಬಾಂಬ್ ಕರೆ ಎಂದು ಪೊಲೀಸರು ಸ್ಪಷ್ಟ ಪಡಿಸಿದರು.

ಹುಸಿ ಬಾಂಬ್ ಕರೆಯಿಂದ ಕೆಲ ಹೊತ್ತು ಕಾಲೇಜಿನಲ್ಲಿ ಆತಂಕ ಛಾಯೆ ಮೂಡಿತ್ತು. ವಿದ್ಯಾರ್ಥಿಗಳು ಭಯಗೊಂಡಿದ್ದರು. ಇದರಿಂದ ಇಂದು ತರಗತಿಗಳನ್ನು ರದ್ದು ಪಡಿಸಲಾಯಿತು. ಈ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಮತ್ತಷ್ಟು
ಪುತ್ತಿಗೆ ಶ್ರೀಗಳ ಕೃಷ್ಣಪೂಜೆಗೆ ಕೋರ್ಟ್ ಅಸ್ತು
ರೈಲ್ವೆ ನೇಮಕಾತಿ ವಿವಾದ: ಮುಂದುವರಿದ ಪ್ರತಿಭಟನೆ
ರೆಡ್ಡಿ ಬಿಜೆಪಿ ಸೇರ್ಪಡೆಗೆ ವಿರೋಧ
ಉನ್ನತ ಶಿಕ್ಷಣಕ್ಕೆ ಸೀಮಿತ ಮಹತ್ವ: ಅನ್ಸಾರಿ ವಿಷಾದ
ನಕ್ಸಲರು, ಕಮ್ಯೂನಿಸ್ಟರು ಪ್ರಗತಿಯ ಶತ್ರುಗಳು: ಶ್ರೀಶ್ರೀ
ಅತ್ತಲೋ ಇತ್ತಲೋ... ಪ್ರಕಾಶ್ ಬಣದ ಮುಗಿಯದ ಗೊಂದಲ