ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರು ತಮಿಳುನಾಡಿನ ವ್ಯಕ್ತಿಗಳನ್ನು ನಗರದ ಉಪ್ಪಾರಪೇಟೆ ಠಾಣೆಯ ಪೊಲೀಸರು ಬಂಧಿಸಿ, ಸುಮಾರು 3.10 ಲಕ್ಷ ರೂ. ಖೋಟಾನೋಟನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ವೆಲ್ಲೂರು ತಾಲೂಕಿನ ಹಲೆ ಅಗ್ರಹಾರಂ ನಿವಾಸಿಗಳಾದ ಮಾಣಿಕ್ಯಂ ಮತ್ತು ಬಾಬು ಎಂಬುವವರನ್ನು ಬಂಧಿಸಲಾಗಿದ್ದು, ಖೋಟಾ ನೋಟುಗಳನ್ನು ಇತರರಿಗೆ ಹಸ್ತಾಂತರ ಮಾಡುವ ಸಲುವಾಗಿ ಕಾಯುತ್ತಿದ್ದಾಗ ಪೊಲೀಸರು ಮಾಹಿತಿ ಪಡೆದು ದಾಳಿ ಮಾಡಿ ಬಂಧಿಸಿದರು ಎಂದು ತಿಳಿದುಬಂದಿದೆ.
ಈ ಬಂಧಿತ ವ್ಯಕ್ತಿಗಳು ಅಗ್ರಹಾರಂನಲ್ಲಿ ಖೋಟಾನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದರು. ಅದಕ್ಕಾಗಿ ಉಪಯೋಗಿಸುತ್ತಿದ್ದ ಕಂಪ್ಯೂಟರ್, ಯಂತ್ರ, ಬಣ್ಣದ ಪೇಪರ್ ಹಾಗೂ ಇತರೆ ರಾಸಾಯನಿಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಡಿಸಿಪಿ ಕೆ.ವಿ. ಶರತ್ಶ್ಚಂದ್ರ ಅವರ ಮಾಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
|