ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎರಡು ಪ್ರತ್ಯೇಕ ಅಪಘಾತಗಳಲ್ಲಿ ಆರು ಸಾವು
ರಾಮನಗರ ಸಮೀಪ ಟೆಂಪೊ ಮತ್ತು ಮಿನಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೆಂಗಳೂರಿನ ಓರ್ವ ವ್ಯಕ್ತಿ ಮೃತಪಟ್ಟು ಐವರು ಗಾಯಗೊಂಡಿದ್ದಾರೆ. ಮೃತಪಟ್ಟವನನ್ನು ಶ್ರೀನಗರದ ನಿವಾಸಿ ಸಿ.ಸುರೇಶ್ ಎಂದು ಗುರುತಿಸಲಾಗಿದೆ.

ಊಟಿಯಿಂದ ಪ್ರವಾಸ ಮುಗಿಸಿ ಬರುತ್ತಿದ್ದ ಮಿನಿ ಬಸ್ಸಿಗೆ ಜಾನಪದ ಲೋಕದ ಸಮೀಪ ಅವರೇಕಾಯಿ ತುಂಬಿದ ಟ್ರಕ್ ಡಿಕ್ಕಿ ಹೊಡೆದದ್ದರಿಂದ ಈ ದುರ್ಘಟನೆ ಸಂಭವಿಸಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಇದೇ ಬಗೆಯ ಇನ್ನೊಂದು ಅಪಘಾತ ಕಲ್ಬುರ್ಗಿ ಸಮೀಪ ನಡೆದಿದೆ. ದಿನಪತ್ರಿಕೆ ಜೀಪ್ ಹಾಗೂ ಲಾರಿ ನಡುವಣ ಸಂಭವಿಸಿದ ಡಿಕ್ಕಿಯಿಂದಾಗಿ ಜೀಪಿನ ಚಾಲಕ, ಕ್ಲೀನರ್ ಸೇರಿದಂತೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪೂನಾ-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿಯ ಸಮೀಪವಿರುವ ಸದಾಶಿವ ಪೇಟ-ಬುದಿರಾ ನಡುವಿನ ಹೆದ್ದಾರಿಯಲ್ಲಿ ಈ ಅವಗಢ ಸಂಭವಿಸಿದ್ದು, ಹೈದ್ರಾಬಾದಿನಲ್ಲಿ ಮುದ್ರಣಗೊಂಡಿದ್ದ ಕನ್ನಡ ದಿನಪತ್ರಿಕೆಯನ್ನು ಜೀಪ್ ಹೊತ್ತು ತರುತ್ತಿತ್ತು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬುದಿರಾ ಪೊಲೀಸರು ಧಾವಿಸಿದ್ದು ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು
ರೈಲು ನಿಲ್ದಾಣಕ್ಕೆ ಹೋರಾಟಗಾರರ ಮುತ್ತಿಗೆ
3.10 ಲಕ್ಷ ರೂ. ಖೋಟಾ ನೋಟು ವಶ
ಕಾಲೇಜಿಗೆ ಹುಸಿಬಾಂಬ್ ಕರೆ ಸೃಷ್ಟಿಸಿದ ಆತಂಕ
ಪುತ್ತಿಗೆ ಶ್ರೀಗಳ ಕೃಷ್ಣಪೂಜೆಗೆ ಕೋರ್ಟ್ ಅಸ್ತು
ರೈಲ್ವೆ ನೇಮಕಾತಿ ವಿವಾದ: ಮುಂದುವರಿದ ಪ್ರತಿಭಟನೆ
ರೆಡ್ಡಿ ಬಿಜೆಪಿ ಸೇರ್ಪಡೆಗೆ ವಿರೋಧ