ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರವಾಸಿಗನ ಲೂಟಿ : ಆತಂಕಗೊಂಡ ಹೊಟೇಲ್ ಸಿಬ್ಬಂದಿ
ಬೆಂಗಳೂರು ನಗರ ಪ್ರವಾಸಿಗರ ನೆಚ್ಚಿನ ತಾಣ. ಆದರೆ ಇತ್ತೀಚೆಗಷ್ಟೆ ಹೊಟೇಲ್ನಲ್ಲಿ ತಂಗಿದ್ದ ವಿದೇಶಿ ಪ್ರವಾಸಿಗನೊಬ್ಬನ ಕೋಣೆ ಲೂಟಿ ಮಾಡಿದ ಘಟನೆ ನಿನ್ನೆ ರಾತ್ರಿ ತಡವಾಗಿ ಬೆಳಕಿಗೆ ಬಂದಿದೆ. ಈ ಮೂಲಕ ಪ್ರವಾಸಿಗರಲ್ಲಿ ಹೊಟೇಲ್ ಸುರಕ್ಷಿತ ತಾಣವೇ ಎಂಬ ಪ್ರಶ್ನೆ ಮೂಡಿರುವುದಂತೂ ಸಹಜ.

ನಗರಕ್ಕೆ ಆಗಮಿಸಿದ ಬ್ರೆಜಿಲ್ನ ವಿಥೊರಿಯಾ ನಿವಾಸಿ ಸಿಯೋ ಫರ್ನಾಂಡೋ, ಬೆಂಗಳೂರು ಗೇಟ್ ಹೋಟೆಲ್ನ ರೂಮ್ನಲ್ಲಿ ವಾಸವಾಗಿದ್ದ. ಸಂಜೆ ಎಂಜಿ ರಸ್ತೆಗೆ ಅವನ ಸ್ನೇಹಿತರ ಜೊತೆಯಲ್ಲಿ ತೆರಳಿದ್ದ ಆತ ತಡರಾತ್ರಿ ವಾಪಸ್ಸಾಗಿದ್ದರು. ಮರುದಿನ ಬೆಳಿಗ್ಗೆ ಆತನ ಸ್ನೇಹಿತ ರೂಮಿಗೆ ಬಂದಾಗ ಬಾಗಿಲು ತೆರೆದಿತ್ತು. ಒಳಗೆ ಬಂದರೆ ಈತ ಗಾಢವಾಗಿ ನಿದ್ರಿಸುತ್ತಿದ್ದ. ಬಳಿಕ ಆತನನ್ನು ಎಚ್ಚರಿಸಿದಾಗ ಕಳ್ಳತನವಾಗಿರುವುದು ಸ್ಪಷ್ಟವಾಯಿತು. ಈಗ ಸಿಯೋ ಹಣ ಕಳೆದುಕೊಂಡು ಕಂಗಾಲಾಗಿದ್ದಾನೆ.

ಈ ಪ್ರಕರಣವನ್ನು ಉಪ್ಪಾರಪೇಟೆ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ. ಇದರಿಂದ ಬೆಂಗಳೂರು ವಾತಾವರಣಕ್ಕೆ ಖುಷಿಪಟ್ಟು ಬಂದಿರುವ ಪ್ರವಾಸಿಗರಿಗೆ ಈ ಪ್ರಕರಣದಿಂದ ಸ್ವಲ್ಪ ಮಟ್ಟಿಗೆ ಆತಂಕ ಹುಟ್ಟಿರುವುದಂತೂ ಸತ್ಯ. ಅಲ್ಲದೆ, ಈ ಬಗ್ಗೆ ಹೊಟೇಲ್ ಸಿಬ್ಬಂದಿಗಳಿಗೂ ಇದು ಬಿಸಿ ತಟ್ಟಿದೆ. ಸುರಕ್ಷತೆಗಾಗಿ ಹೊಟೇಲ್ ಆರಿಸಿಕೊಳ್ಳುವ ಪ್ರವಾಸಿಗರು ಇನ್ನು ಸ್ವಲ್ಪ ಯೊಚಿಸುವಂತಾಗಿದೆ.

ಈ ಪ್ರಕರಣದಿಂದ ನಗರ ಸ್ವಲ್ಪ ಎಚ್ಚೆತ್ತುಕೊಳ್ಳಬೇಕಾಗಿದೆ. ಅಭಿಮಾನದಿಂದ ಬರುವ ಪ್ರವಾಸಿಗರಿಗೆ ಜನರ ಮಾನವೀಯತೆ ದೃಷ್ಟಿಯನ್ನು ತೋರಿಸುವಂಥ ಕೆಲಸ ಆಗಬೇಕಿದೆ.
ಮತ್ತಷ್ಟು
ಅಂಡರ್ ಪಾಸ್ ನಿರ್ಮಾಣಕ್ಕೆ ಅತ್ಯಲ್ಪ ಅವಧಿ
ಎರಡು ಪ್ರತ್ಯೇಕ ಅಪಘಾತಗಳಲ್ಲಿ ಆರು ಸಾವು
ರೈಲು ನಿಲ್ದಾಣಕ್ಕೆ ಹೋರಾಟಗಾರರ ಮುತ್ತಿಗೆ
3.10 ಲಕ್ಷ ರೂ. ಖೋಟಾ ನೋಟು ವಶ
ಕಾಲೇಜಿಗೆ ಹುಸಿಬಾಂಬ್ ಕರೆ ಸೃಷ್ಟಿಸಿದ ಆತಂಕ
ಪುತ್ತಿಗೆ ಶ್ರೀಗಳ ಕೃಷ್ಣಪೂಜೆಗೆ ಕೋರ್ಟ್ ಅಸ್ತು