ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಡಗರ ಸಂಭ್ರಮದ ಸಂಕ್ರಾತಿ
ಸಂಕ್ರಾತಿ ಸಂಭ್ರಮ ಯಾರಿಗೆ ಎಷ್ಟೆಷ್ಟು?
ಬೆಂಗಳೂರಿನ ಮಟ್ಟಿಗೆ ಸಂಕ್ರಾತಿ ದೊಡ್ಡ ಹಬ್ಬವೇ ಸರಿ. ಪರಸ್ಪರ ಎಳ್ಳು ಬೆಲ್ಲ ಹಂಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ನಗರದಲ್ಲಿ ಸಾಮಾನ್ಯವಾಗಿತ್ತು. ಹೂಗಳಿಂದ ಆಲಂಕೃತಗೊಂಡಿದ್ದ ನಗರದಲ್ಲಿ ಎಲ್ಲೆಡೆ ಸಂಭ್ರಮ, ಸಡಗರ ತುಂಬಿ ತುಳುಕುತ್ತಿತ್ತು. ಒಟ್ಟಿನಲ್ಲಿ ಇಡೀ ನಗರವೇ ಸಂಕ್ರಾತಿಗೆ ತನ್ನನ್ನು ತೆರೆದುಕೊಂಡಿತ್ತು.

ಸಂಕ್ರಾಂತಿಯೆಂದರೆ ಮಕ್ಕಳಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಮನೆಯನ್ನೆಲ್ಲಾ ಬಣ್ಣ ಬಣ್ಣದ ರಂಗೋಲಿಯೊಂದಿಗೆ ಸಿಂಗರಿಸಿ, ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು, ಹೆಣ್ಣು ಮಕ್ಕಳು ಎಲ್ಲರನ್ನು ಸ್ವಾಗತಿಸುವ ದೃಶ್ಯ ಎಲ್ಲೆಡೆ ಕಂಡು ಬಂದಿತ್ತು. ಮನೆ ತುಂಬಾ ಸಂತೋಷದ ವಾತಾವರಣ. ಏನೇ ಬರಲಿ ಹಬ್ಬ ಮಾತ್ರ ಜೋರಾಗಿಯೇ ಇರಬೇಕು ಎಂಬ ಅಭಿಪ್ರಾಯದ ಹೂರಣ ಇಲ್ಲಿ ಎದ್ದು ಕಂಡಿದ್ದು ವಿಶೇಷ.

ದೂರದಲ್ಲಿನ ಬಂಧುಗಳಿಗೆ ಪೋನ್ ಮೂಲಕ ಶುಭಾಶಯ ಹೇಳವವರದು ಒಂದು ಭರಾಟೆಯಾದರೆ, ಎಸ್ಎಂಎಸ್ ಮೂಲಕ ಸಂದೇಶ ಕಳುಹಿಸಿ ಶುಭಾಶಯ ಹೇಳಿಕೊಳ್ಳುತ್ತಿದ್ದುದು ಇನ್ನು ಕೆಲವರ ವೈಶಿಷ್ಟ್ಯವಾಗಿತ್ತು. ಒಟ್ಟಿನಲ್ಲಿ ಎಲ್ಲೆಡೆ ಹಬ್ಬದ ಚೆಲುವಿನ ಚಿತ್ತಾರ. ಚಿತ್ರ ನಟ-ನಟಿಯರೂ ತಾವೇನೂ ಕಮ್ಮಿ ಇಲ್ಲ ಎಂಬಂತೆ ಟಿವಿ ವಾಹಿನಿಗಳ ಸಂಕ್ರಾತಿ ಹಬ್ಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ತಮ್ಮ ಉತ್ಸಾಹವನ್ನು ಹೊಮ್ಮಿಸಿದ್ದು ವಿಶೇಷವಾಗಿತ್ತು. ಬೀದಿ ಬೀದಿಯಲ್ಲೂ ಇಂದು ಸಂಕ್ರಾತಿಯದೇ ರಂಗು.

ಹಬ್ಬ ಬಂದರೆ ಸಾಕು ವಸ್ತುಗಳ ಬೆಲೆಗಳು ಗಗನಕ್ಕೇರುತ್ತವೆ. ಬೆಲೆಗಳನ್ನು ಗಗನಕ್ಕೆ ಏರಿಸಿದರೂ ಕೊಳ್ಳುವವರ ಸಂಖ್ಯೆಗೇನು ಕಡಿಮೆಯಿಲ್ಲ ಎನ್ನುವ ವಾತಾವರಣವನ್ನು ಮಾರುಕಟ್ಟೆಯಲ್ಲಿ ನೋಡಬಹುದಿತ್ತು. ಸಂಭ್ರಮದ ಜೊತೆಯಲ್ಲಿ ಕಬ್ಬು, ಹೂವಿನ ವ್ಯಾಪಾರಸ್ಥರು, ಇತರೆ ಮಾರಾಟಗಾರರಿಗೂ ಜೇಬು ತುಂಬಿತಲ್ಲಾ ಅನ್ನುವ ಸಂತೋಷ. ಒಂದು ಕಡೆ ಸಂಭ್ರಮದಿಂದ ಆಚರಿಸುವ ಬಳಗವಿದ್ದರೆ, ಇನ್ನೊಂದೆಡೆ ವ್ಯಾಪಾರದಿಂದ ಇಂದಾದರೂ ಹೊಟ್ಟೆಗೆ ಹಿಟ್ಟು ಬಿದ್ದಿತ್ತಲ್ಲ ಎನ್ನುವ ನೆಮ್ಮದಿ.
ಮತ್ತಷ್ಟು
ಪ್ರವಾಸಿಗನ ಲೂಟಿ : ಆತಂಕಗೊಂಡ ಹೊಟೇಲ್ ಸಿಬ್ಬಂದಿ
ಅಂಡರ್ ಪಾಸ್ ನಿರ್ಮಾಣಕ್ಕೆ ಅತ್ಯಲ್ಪ ಅವಧಿ
ಎರಡು ಪ್ರತ್ಯೇಕ ಅಪಘಾತಗಳಲ್ಲಿ ಆರು ಸಾವು
ರೈಲು ನಿಲ್ದಾಣಕ್ಕೆ ಹೋರಾಟಗಾರರ ಮುತ್ತಿಗೆ
3.10 ಲಕ್ಷ ರೂ. ಖೋಟಾ ನೋಟು ವಶ
ಕಾಲೇಜಿಗೆ ಹುಸಿಬಾಂಬ್ ಕರೆ ಸೃಷ್ಟಿಸಿದ ಆತಂಕ