ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರ್ಯಾಯ ವಿವಾದ: ಮಳೆ ನಿಂತರೂ ತೊಟ್ಟಿಕ್ಕುತ್ತಿರುವ ನೀರು
ಪುತ್ತಿಗೆ ಶ್ರೀಗಳ ಪರ್ಯಾಯ ಪೀಠಾರೋಹಣ ಮತ್ತು ಶ್ರೀಕೃಷ್ಣ ಪೂಜೆಗೆ ಸಂಬಂಧಿಸಿದಂತೆ ತಡೆಯಾಜ್ಞೆ ಕೋರಿ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಹೂಡಲಾಗಿದ್ದ ಸಿವಿಲ್ ದಾವೆಯೇನೋ ತಿರಸ್ಕ್ಕತಗೊಂಡಿದೆ. ಮಠದ ಆಂತರಿಕ ವಿಷಯದಲ್ಲಿ ವಾದಿಗಳಿಗೆ ಹಸ್ತಕ್ಷೇಪ ಮಾಡುವ ಹಕ್ಕಿಲ್ಲ; ಪರ್ಯಾಯದ ಸಿದ್ಧತೆಗಳು ಕಳೆದೊಂದು ವರ್ಷದಿಂದ ನಡೆಯುತ್ತಿದ್ದರೂ ಕಂಡುಬರದ ಆಕ್ಷೇಪಣೆಗಳನ್ನು ಪರ್ಯಾಯಕ್ಕೆ ಕೆಲವೇ ದಿನಗಳಿರುವಾಗ ಮಂಡಿಸುವುದು ತರವಲ್ಲ ಎಂಬುದು ನ್ಯಾಯಾಲಯದ ಅಭಿಮತ.

ಈ ಬೆಳವಣಿಗೆಯಿಂದ ಪುತ್ತಿಗೆ ಮಠದಲ್ಲಿ ಸಂಭ್ರಮದ ವಾತಾವರಣವೇನೋ ನಿರ್ಮಾಣವಾಗಿದೆ. ಶಿಕೊನೆಗೂ ಕೃಷ್ಣ ತಮ್ಮ ಪರ ಇದ್ದಾನಲ್ಲಾಷಿ ಎಂಬ ಸೆಂಟಿಮೆಂಟ್ ಲೇಪಿತ ಅಭಿಪ್ರಾಯಗಳೂ ಹೊರಬಿದ್ದಿವೆ. ಹಾಗೆಂದ ಮಾತ್ರಕ್ಕೆ ಪುತ್ತಿಗೆ ಪರ್ಯಾಯ ಸಮಾರಂಭ ಸುಸೂತ್ರವಾಗಿ ನಡೆಯುವುದೇ? ಹಾಗೆ ನಡೆಯಲು ಪೂರ್ವಾಗ್ರಹ ಪೀಡಿತ ಮನಸ್ಸುಗಳು ಅವಕಾಶ ಕೊಡುತ್ತವೆಯೇ? ಈ ಮನಸ್ಸುಗಳನ್ನು ನ್ಯಾಯಾಲಯದ ಆದೇಶವಾಗಲೀ, ಅಭಿಪ್ರಾಯವಾಗಲೀ ಬದಲಿಸಲು ಸಾಧ್ಯವೇ? ಮೇಲ್ನೌಟಕ್ಕೆ ಶಿಆಗಲಿಷಿ ಎಂದು ಒಪ್ಪಿಕೊಂಡರೂ ಅಸಮಧಾನದ ಹೊಗೆ ಒಳಗೊಳಗೇ ಗುಪ್ತಗಾಮಿನಿಯಾಗಿ ಹರಿಯಲು ಪ್ರಾರಂಭಿಸುವುದಿಲ್ಲವೇ? ಎಂಬ ಅಭಿಪ್ರಾಯದ ಹೊಗೆ ಉಡುಪಿಯಲ್ಲಿ ದಟ್ಟವಾಗಿ ಎದ್ದಿದೆ. ಇದು ಉಡುಪಿಯ ರಥಬೀದಿಯಲ್ಲಿನ ಚರ್ಚಾವಿಷಯ ಆಗಿರುವಂತೆಯೇ, ಧರ್ಮಜಿಜ್ಞಾಸುಗಳಿಗೆ ಮಿಲಿಯನ್ ಡಾಲರ್ ಪ್ರಶ್ನೆಯೂ ಆಗಿದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಪುತ್ತಿಗೆ ಶ್ರೀಗಳು ಅಷ್ಠಮಠಗಳ ಅಲಿಖಿತ ಸಂವಿಧಾನಕ್ಕೆ ಒಪ್ಪದಿದ್ದರೆ, ಬಗ್ಗದಿದ್ದರೆ ಸಂಕ್ರಾಂತಿಯ ಮಧ್ಯಾಹ್ನದಿಂದ ತಾವು ಉಪವಾಸ ಆಚರಿಸುವುದಾಗಿ ಪೇಜಾವರ ಶ್ರೀಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೇ ಅಷ್ಟಾಗಿ ಬೆಳಕಿಗೆ ಬರದ ಮತ್ತೆರಡು ಲಿಉಪವಾಸಳಿ ಪ್ರಕರಣಗಳು ಈಗ ಎಲ್ಲರ ಗಮನ ಸೆಳೆದಿದ್ದು, ಧಾರ್ಮಿಕ ಮನಸ್ಸುಗಳು-ಕಟ್ಟುಪಾಡುಗಳನ್ನು ನ್ಯಾಯಾಲಯದ ಅಭಿಪ್ರಾಯಗಳು ಕಟ್ಟಿಹಾಕಲು ಸಾಧ್ಯವಿಲ್ಲ ಎಂಬ ಮಾತುಗಳಿಗೆ ಪುಷ್ಟಿ ನೀಡುವಂತಿವೆ. ಪುತ್ತಿಗೆ ಮಠಾಧೀಶರು ಶ್ರೀಕೃಷ್ಣ ಪೂಜೆ ಮಾಡುವುದು ಬೇಡ ಹಾಗೂ ಪರ್ಯಾಯದಲ್ಲಿ ಕಿರಿಯ ಸ್ವಾಮೀಜಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿ ಶ್ರೀ ಪಲಿಮಾರು ಶ್ರೀಪಾದರು ಹಾಗೂ ಶ್ರೀ ಪೇಜಾವರ ಕಿರಿಯ ಶ್ರೀಪಾದರು ಈಗಾಗಲೇ ಒಂದು ವಾರದಿಂದ ಉಪವಾಸ ನಿರಶನ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಪೇಜಾವರರೂ ಉಪವಾಸ ಆಚರಣೆಯನ್ನು ಪ್ರಾರಂಭಿಸಿದರೆ ಉಡುಪಿಯಲ್ಲಿ ಒಂದು ರೀತಿ ಅಘೋಷಿತ ಮೌನದ ವಾತಾವರಣ ನಿರ್ಮಾಣವಾಗಬಹುದು ಎಂಬ ಆಭಿಪ್ರಾಯ ಅಷ್ಟಮಠಗಳ ವ್ಯಾಪ್ತಿಯಲ್ಲಿ ಕಂಡುಬರುತ್ತಿದೆ. ಏಕೆಂದರೆ ಪುತ್ತಿಗೆ ಪರ್ಯಾಯಕ್ಕೆ ಸಂಬಂಧಪಟ್ಟ ವಾದ-ವಿವಾದಗಳು ಏನೇ ಇರಲಿ, ಪುತ್ತಿಗೆ ಶ್ರೀಗಳು ಹಾಗೂ ಪೇಜಾವರ ಶ್ರೀಗಳಿಗೆ ಅವರದೇ ಆದ ಅಭಿಮಾನೀ ಭಕ್ತರ ವೃಂದವಿದೆ. ತಮ್ಮ ಹಾಗೂ ಆರೂ ಮಠಗಳ ಮಾತನ್ನು ಮೀರಿ ಪುತ್ತಿಗೆ ಶ್ರೀಗಳು ಶ್ರೀಕೃಷ್ಣನನ್ನು ಮುಟ್ಟಿ ಪೂಜಿಸಲು ಮುಂದಾದದ್ದೇ ಆದರೆ ಮುಂದೆ ಆಗುವ ಅನಾಹುತಗಳಿಗೆ ತಾವು ಜವಾಬ್ದಾರರಲ್ಲ ಎಂದು ಪೇಜಾವರ ಶ್ರೀಗಳು ಈಗಾಗಲೇ ಎಚ್ಚರಿಸಿದ್ದಾರೆ. ಈ ಸಂಭವನೀಯ ಶಿಅನಾಹುತದಷಿ ಸ್ವರೂಪವೇನು? ಅದು ಧಾರ್ಮಿಕ ನೆಲೆಗಟ್ಟಿನಲ್ಲಿ ಆಗುವಂಥಾದ್ದೇ? ಅಥವಾ ಅಭಿಮಾನೀ ಪಡೆಗಳು ಪರಸ್ಪರ ಎದಿರು ಬದಿರು ನಿಂತಾಗ ಆಗುವಂಥಾದ್ದೇ ಎಂಬುದನ್ನು ಯಾರೂ ಸ್ಪಷ್ಟೀಕರಿಸಿಲ್ಲ, ಒಳಗೊಳಗೇ ಅಸಮಾಧಾನದ ಹೊಗೆಯಾಡುತ್ತಿರುವಾಗ ಇಂಥ ಸ್ಪಷ್ಟೀಕರಣ ಸಾಧ್ಯವೂ ಇಲ್ಲ.

ಅದನ್ನು ಸಾಕ್ಷಾತ್ ಶ್ರೀಕೃಷ್ಣನೇ ಬಗೆಹರಿಸಬೇಕು. ರುಕ್ಮಿಣಿ-ಸತ್ಯಭಾಮೆಯರ ನಡುವಿನ ಜಗಳ ಪರಿಹರಿಸಿದವನಿಗೆ ಮಠಾಧಿಪತಿಗಳ ನಡುವಿನ ಭಿನ್ನಾಭಿಪ್ರಾಯ ಬಗೆಹರಿಸುವುದು ಕಷ್ಟವೇನಲ್ಲ. ಆದರೆ ಎರಡೂ ಕಡೆಯ ಮನಸುಗಳು ಹದಗೊಳ್ಳಬೇಕು, ಅಷ್ಟೇ!
ಮತ್ತಷ್ಟು
ಸಡಗರ ಸಂಭ್ರಮದ ಸಂಕ್ರಾತಿ
ಪ್ರವಾಸಿಗನ ಲೂಟಿ : ಆತಂಕಗೊಂಡ ಹೊಟೇಲ್ ಸಿಬ್ಬಂದಿ
ಅಂಡರ್ ಪಾಸ್ ನಿರ್ಮಾಣಕ್ಕೆ ಅತ್ಯಲ್ಪ ಅವಧಿ
ಎರಡು ಪ್ರತ್ಯೇಕ ಅಪಘಾತಗಳಲ್ಲಿ ಆರು ಸಾವು
ರೈಲು ನಿಲ್ದಾಣಕ್ಕೆ ಹೋರಾಟಗಾರರ ಮುತ್ತಿಗೆ
3.10 ಲಕ್ಷ ರೂ. ಖೋಟಾ ನೋಟು ವಶ