ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಕರೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರನ್ನು ಹೈಕಮಾಂಡ್ ಮಾತುಕತೆಗೆ ಬರುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ದಂಡು ಒಂದೆರಡು ದಿನಗಳಲ್ಲಿ ದೆಹಲಿಗೆ ಪ್ರಯಾಣ ಬೆಳಸಲಿದೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ನಾಯಕತ್ವದ ಬದಲಾವಣೆ, ಚುನಾವಣಾ ಕಾರ್ಯತಂತ್ರ, ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನಮಾನ ಸೇರಿದಂತೆ ಹಲವು ವಿಷಯಗಳು ಮಾತುಕತೆಯಲ್ಲಿ ಬರುವ ಸಾಧ್ಯತೆಗಳಿವೆ.

ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಈ ಮೊದಲೇ ಆಗಬೇಕಿದ್ದು, ಗುಜರಾತ್ ಚುನಾವಣೆ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅನಾರೋಗ್ಯದ ನಿಮಿತ್ತ ವಿಳಂಬವಾಗಿತ್ತು. ಇದರಿಂದ ಕೆಪಿಸಿಸಿ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ನಾಯಕರು ಹೈಕಮಾಂಡ್ಗೆ ಮನವರಿಕೆ ಮಾಡಿದ್ದು, ಆದಷ್ಟು ಬೇಗ ಹೊಸ ಪಟ್ಟಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಇದನ್ನು ಪರೀಶೀಲಿಸಿ ಹೈಕಮಾಂಡ್ ಸಂಕ್ರಾತಿ ಬಳಿಕ ಕೆಪಿಸಿಸಿಗೆ ಹೊಸ ಸ್ವರೂಪ ನೀಡುವ ಭರವಸೆಯನ್ನು ವ್ಯಕ್ತಪಡಿಸಿರುವುದರಿಂದ ದಿಲ್ಲಿ ಪ್ರಯಾಣಕ್ಕೆ ಸಜ್ಜುಗೊಂಡಿದೆ.

ಅಲ್ಲದೆ, ಮಹಾರಾಷ್ಟ್ರದ ರಾಜ್ಯಪಾಲರಾದ ಎಸ್.ಎಂ. ಕೃಷ್ಣರವರು ರಾಜ್ಯ ರಾಜಕೀಯಕ್ಕೆ ಮರಳುವ ಲಕ್ಷಣಗಳು ಕಂಡು ಬಂದಿರುವುದರಿಂದ ಮುಖಂಡರ ದಿಲ್ಲಿ ಭೇಟಿಗೆ ಮಹತ್ವ ಬಂದಿದೆ. ಈ ಮೂಲಕ ವಾರದೊಳಗೆ ಹೊಸ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗುವ ಸಂಭವವಿದೆ.
ಮತ್ತಷ್ಟು
ಪರ್ಯಾಯ ವಿವಾದ: ಮಳೆ ನಿಂತರೂ ತೊಟ್ಟಿಕ್ಕುತ್ತಿರುವ ನೀರು
ಸಡಗರ ಸಂಭ್ರಮದ ಸಂಕ್ರಾತಿ
ಪ್ರವಾಸಿಗನ ಲೂಟಿ : ಆತಂಕಗೊಂಡ ಹೊಟೇಲ್ ಸಿಬ್ಬಂದಿ
ಅಂಡರ್ ಪಾಸ್ ನಿರ್ಮಾಣಕ್ಕೆ ಅತ್ಯಲ್ಪ ಅವಧಿ
ಎರಡು ಪ್ರತ್ಯೇಕ ಅಪಘಾತಗಳಲ್ಲಿ ಆರು ಸಾವು
ರೈಲು ನಿಲ್ದಾಣಕ್ಕೆ ಹೋರಾಟಗಾರರ ಮುತ್ತಿಗೆ