ಶ್ರೀಕೃಷ್ಣ ಪೂಜೆಯ ಬಗ್ಗೆ ಪುತ್ತಿಗೆ ಶ್ರೀಗಳು ಕುರಿತು ಪಟ್ಟು ಸಡಿಲಿಸದಿದ್ದರೆ ಉಪವಾಸ ಕೈಗೊಳ್ಳುವುದಾಗಿ ತಿಳಿಸಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಪೇಜಾವರರ ಮನವೊಲಿಸುವ ಪುತ್ತಿಗೆ ಶ್ರೀಗಳ ಪ್ರಯತ್ನ ಫಲ ನೀಡಲಿಲ್ಲ.
ಕೃಷ್ಣ ಪೂಜೆಯ ಕುರಿತಾದ ತಮ್ಮ ಪಟ್ಟು ಬಿಡದ ಪುತ್ತಿಗೆ ಶ್ರೀಗಳಿಗೆ ಪ್ರತಿಯಾಗಿ ಪೇಜಾವರರು ತಮ್ಮ ಉಪವಾಸ ಆಚರಣೆಯನ್ನು ಮಂಗಳವಾರ ಪ್ರಾರಂಭಿಸಿದ್ದು, ಇದು ಮೂರು ದಿನಗಳವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.
ಪುತ್ತಿಗೆ ಶ್ರೀಗಳು ಒಡ್ಡಿರುವ ಎರಡು ಲೌಕಿಕ ಶರತ್ತುಗಳನ್ನು ಹಿಂದಕ್ಕೆ ಪಡೆಯುವವರೆಗೂ ತಮ್ಮ ಉಪವಾಸ ನಿಲ್ಲುವುದಿಲ್ಲ ಎಂದು ಪೇಜಾವರರು ಸ್ಪಷ್ಟಪಡಿಸಿದ್ದಾರೆ. ಆದರೆ ಆ ಎರಡು ಲೌಕಿಕ ಷರತ್ತುಗಳೇನು ಎಂಬುದನ್ನು ಹೇಳಲು ಅವರು ನಿರಾಕರಿಸಿದ್ದಾರೆ.
ಒಂದು ವೇಳೆ ಪುತ್ತಿಗೆ ಶ್ರೀಗಳು ತಮ್ಮ ಬಿಗಿಪಟ್ಟನ್ನು ಸಡಿಲಿಸುವುದಾದರೆ ತಾವೂ ಸಹ ಒಪ್ಪುವುದಾಗಿ ತಿಳಿಸಿರುವ ಪೇಜಾವರರು, ಇದಕ್ಕೆ ಉಳಿದೆಲ್ಲ ಮಠಗಳ ಯತಿಗಳೂ ಸಹಮತ ವ್ಯಕ್ತಪಡಿಸಿದ್ದಾರೆ; ಪುತ್ತಿಗೆ ಶ್ರೀಗಳು ಸಂಪ್ರದಾಯದಂತೆ ನಡೆದುಕೊಂಡರೆ ಪರ್ಯಾಯದ ಮೆರವಣಿಗೆಯಲ್ಲಿ ಈ ಯತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
|