ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈತ್ರಿ ಇಲ್ಲದೆಯೇ ಜೆಡಿಎಸ್ ಅಧಿಕಾರಕ್ಕೆ: ಕುಮಾರ
ಜೆಡಿಎಸ್ ಪಕ್ಷವು ಮುಂದಿನ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸೆಣಸಿ ಅಧಿಕಾರಕ್ಕೇರಲಿದೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಫೆಬ್ರವರಿ 10ರಿಂದ ಸಕ್ರಿಯ ರಾಜಕಾರಣಕ್ಕೆ ಮರಳಿ ಬರುವುದಾಗಿ ಘೋಷಿಸಿದ್ದಾರೆ.

ಸಂಕ್ರಾತಿ ಪ್ರಯುಕ್ತ ಶುಭಾಶಯ ಕೋರಲು ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪಕ್ಷಕ್ಕೆ ಮರಳಿ ಬರುವವರಿಗೆ ಸ್ವಾಗತವಿದೆ ಎಂದು ತಿಳಿಸಿದ್ದಾರೆ.

ಕಬ್ಬಿಗೆ ನೀಡಬೇಕಾದ ಬೆಂಬಲ ಬೆಲೆಯ ಕುರಿತು ರಾಜ್ಯಪಾಲರ ಜೊತೆ ಚರ್ಚೆ ನಡೆಸಿದ್ದು, ಕಬ್ಬು ಬೆಳೆಗಾರರ ಸಮಸ್ಯೆ ಒಂದು ವಾರದಲ್ಲಿ ಪರಿಹಾರ ಕಂಡುಕೊಳ್ಳಲಿದೆ. ಅಲ್ಲದೆ, ರೈತರಿಗೆ ವಿದ್ಯುತ್ ಪೂರೈಕೆ ಮಾಡುವ ವಿಚಾರವನ್ನೂ ಚರ್ಚಿಸಿರುವುದಾಗಿ ಅವರು ತಿಳಿಸಿದರು.

ಈ ಮಧ್ಯೆ ಜೆಡಿಎಸ್‌ನಿಂದ ಹೊರಬಂದಿರುವ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ಬಿಜೆಪಿ ಸೇರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಪ್ರಕಾಶ್ ಬಣದಲ್ಲಿ ಭಿನ್ನಾಭಿಪ್ರಾಯವೆದ್ದಿದೆ. ನಾಯಕರಾದ ಸೂರ್ಯನಾರಾಯಣ ರೆಡ್ಡಿ, ಬಿ.ಸಿ. ಪಾಟೀಲ್ ಮೊದಲಾದವರು ಬಿಜೆಪಿ ಪಕ್ಷ ಸೇರುವುದಕ್ಕೆ ವಿರೋಧಿಸಿದ್ದಾರೆ ಎಂಬ ವಿಷಯಗಳು ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ
ಮತ್ತಷ್ಟು
ಪರ್ಯಾಯ: ಪೇಜಾವರಶ್ರೀ ಉಪವಾಸ ಸತ್ಯಾಗ್ರಹ
ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಕರೆ
ಪರ್ಯಾಯ ವಿವಾದ: ಮಳೆ ನಿಂತರೂ ತೊಟ್ಟಿಕ್ಕುತ್ತಿರುವ ನೀರು
ಸಡಗರ ಸಂಭ್ರಮದ ಸಂಕ್ರಾತಿ
ಪ್ರವಾಸಿಗನ ಲೂಟಿ : ಆತಂಕಗೊಂಡ ಹೊಟೇಲ್ ಸಿಬ್ಬಂದಿ
ಅಂಡರ್ ಪಾಸ್ ನಿರ್ಮಾಣಕ್ಕೆ ಅತ್ಯಲ್ಪ ಅವಧಿ