ವಿವಾದದ ನಡುವೆಯೂ ಉಡುಪಿ ಕೃಷ್ಣಮಠ ಪರ್ಯಾಯಕ್ಕೆ ಅಭೂತ ಪೂರ್ವ ರೀತಿಯಲ್ಲಿ ಸಜ್ಜುಗೊಂಡಿದೆ. 18ರಂದು ಆರಂಭಗೊಳ್ಳಲಿರುವ ಈ ಮಹೋತ್ಸವದ ಸಿದ್ದತೆ ಭರದಿಂದ ಸಾಗುತ್ತಿದ್ದು, ಉಡುಪಿಯೀಗ ಸಂಭ್ರಮದ ಬೀಡಾಗಿದೆ.
ಜೋಡುಕಟ್ಟೆಯಿಂದ ಪರ್ಯಾಯ ಪಟ್ಟವೇರಲಿರುವ ಶ್ರೀಗಳನ್ನು ಎದುರುಗೊಂಡು ಯತಿ ಸಮೂಹದೊಂದಿಗೆ ಉಡುಪಿಯ ಧಾರ್ಮಿಕ-ಸಾಂಸ್ಕ್ಕತಿಕ ಪರಂಪರೆಯನ್ನು ಬಿಂಬಿಸುವ ದೃಶ್ಯಾವಳಿ ಸಹಿತ ಭಕ್ತ ಸಮುದಾಯದ ಪಥ ಸಂಚಲನದೊಂದಿಗೆ ಪರ್ಯಾಯಕ್ಕೆ ಚಾಲನೆ ದೊರೆಯಲಿದೆ. ಬಳಿಕ ರಥಬೀದಿ ಪ್ರವೇಶ, ದೇಗುಲದ ಸಮುಚ್ಚಯ ಸಂದರ್ಶನ, ಪುತ್ತಿಗೆ ಶ್ರೀಗಳಿಂದ ಆಧ್ಯಾತ್ಮ ಸಮಾವೇಶ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಪರ್ಯಾಯವನ್ನು ವೀಕ್ಷಿಸಲು ಸಾವಿರಾರು ಭಕ್ತರು ಈಗಾಗಲೇ ಆಗಮಿಸಿದ್ದು, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ. ರಾಜಾಂಗಣ ಸಭಾಂಗಣದಲ್ಲಿ 18ರಂದು ಡಾ| ಕಾರ್ತಿಕ್ ಮತ್ತು ಬಳಗದವರಿಂದ ಹಾರ್ಟ್ಬೀಟ್ ಎನ್ಸೆಂಬೆಲ್ ಕಾರ್ಯಕ್ರಮದೊಂದಿಗೆ ಸಾಂಸ್ಕ್ಕತಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಬಳಿಕ ಶ್ರೀಮತಿ ಸುಕನ್ಯಾ ರಾಂಗೋಪಾಲ್‌ರವರಿಂದ ಲಯರಾಗ ಸಂಗಮಮ್, ಶ್ರೀಧರ್ ದಂಪತಿಗಳಿಂದ ನೃತ್ಯರೂಪಕ, ಶ್ರೀಮತಿ ನಿತ್ಯಶ್ರೀ ಮಹದೇವನ್ ಅವರಿಂದ ಸಂಗೀತ ಕಾರ್ಯಕ್ರಮ ಸೇರಿದಂತೆ ಹಲವು ಸಾಂಸ್ಕ್ಕತಿಕ ಕಾರ್ಯಕ್ರಮಗಳು ನಡೆಯಲಿದೆ.
|