ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಎಸ್‌ಪಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು
ಬಹುಜನ ಸಮಾಜ ಪಕ್ಷದ ನಾಯಕಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿಯವರ 52ನೇ ಹುಟ್ಟುಹಬ್ಬದ ಪ್ರಯುಕ್ತ ನಗರದ ಕಲಾಭವನ ಸಭಾಂಗಣದಲ್ಲಿ ನಡೆಸಲಾದ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ನಡುವೆ ನಡೆದ ವಾಗ್ದಾಳಿಯಿಂದ ಸಭೆಯಲ್ಲಿ ಸ್ವಲ್ಪಮಟ್ಟಿಗೆ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು.

ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಪಿಜಿಆರ್ ಸಿಂಧ್ಯ ಅವರು ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದಾಗಲೇ ಸಮಯ ಮೀರಿತ್ತು. ಬಳಿಕ ಜಿಲ್ಲಾಧುರೀಣ ಪಿ.ಎಚ್. ನೀರಲಕೇರಿಯವರು ಮಾಡಿದ ಸ್ವಾಗತ ಭಾಷಣ ದೀರ್ಘವಾಗಿದ್ದುದರಿಂದ ಕಾರ್ಯಕರ್ತರಲ್ಲಿ ಸಹನೆ ಮೀರಿ ಹೋಗಿತ್ತು.

ಈ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ನಾಟಕಕಾರ ಎನ್. ಬಸವರಾಜ ಅವರನ್ನು ಪಿ.ಜಿ.ಆರ್. ಸಿಂಧ್ಯ ಬರಮಾಡಿಕೊಂಡರು. ತದನಂತರ ಸಂಘಟಕರು, ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕಾರ್ಯಕರ್ತರು ಒಬ್ಬೊಬ್ಬರಾಗಿಯೇ ಬನ್ನಿರಿ ಎಂದು ಆಮಂತ್ರಿಸಿದ್ದೆ ತಡ ಕಾರ್ಯಕರ್ತರಲ್ಲಿ ನೂಕುನುಗ್ಗಲು ಪ್ರಾರಂಭವಾಯಿತು. ತಕ್ಷಣವೇ ಸಂಘಟಕರು ಇದಕ್ಕಾಗಿ ವಿಶೇಷ ಸಮಯ ನಿಗದಿ ಪಡಿಸಲಾಗುವುದು ಎಂದು ಘೋಷಿಸಿದಾಗ ಕೆಲವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಮತ್ತೆ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.

ಸಂಘಟಕರೊಂದಿಗೆ ವಾದಕ್ಕೆ ನಿಂತ ಕಾರ್ಯಕರ್ತರು, ಅಭಿಮಾನಿಗಳು ಹಿಂದೆ ಸರಿಯುವ ಲಕ್ಷಣಗಳು ಕಾಣದಿದ್ದಾಗ ಸ್ವತಃ ಪಿಜಿಆರ್ ಸಿಂಧ್ಯರವರೇ ಮಧ್ಯಸ್ಥಿಕೆ ವಹಿಸಿ ವಾತಾವರಣ ತಿಳಿಗೊಳಿಸಿದರು. ಶಿಸ್ತಿನ ಪಕ್ಷದಲ್ಲಿ ಈ ರೀತಿಯ ಆಚಾತುರ್ಯಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶೋಭಾ ಬಳ್ಳಾರಿ ತೀವ್ರ ವಿಷಾದ ವ್ಯಕ್ತ ಪಡಿಸಿದರು. ಬಳಿಕ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು.
ಮತ್ತಷ್ಟು
ಕಮಲದ ತೆಕ್ಕೆಗೆ ಸರಿದ ಬಚ್ಚೇಗೌಡ
ಪೇಜಾವರ ಶ್ರೀ ಉಪವಾಸ, ಪುತ್ತಿಗೆ ಶ್ರೀ ಅನ್ನತ್ಯಾಗ
ಆಟೊ ಚಾಲಕರಿಂದ ಹೆಚ್ಚಿನ ದರ ವಸೂಲಿ
ಕೃಷ್ಣಮಠ ಪರ್ಯಾಯಕ್ಕೆ ಸಜ್ಜುಗೊಂಡ ಉಡುಪಿ
ಮೈತ್ರಿ ಇಲ್ಲದೆಯೇ ಜೆಡಿಎಸ್ ಅಧಿಕಾರಕ್ಕೆ: ಕುಮಾರ
ಪರ್ಯಾಯ: ಪೇಜಾವರಶ್ರೀ ಉಪವಾಸ ಸತ್ಯಾಗ್ರಹ