ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪೊಲೀಸರಿಂದ ಕುಖ್ಯಾತ ಹಂತಕನ ಬಂಧನ
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಳೆದ ಎರಡು ವರ್ಷಗಳಿಂದ ತಲೆನೋವಾಗಿ ಪರಿಣಮಿಸಿದ್ದ ಕುಖ್ಯಾತ ಹಂತಕನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.ಇದರ ವಿವರಗಳನ್ನು ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ಜೆಸಿಬಿ ನಾರಾಯಣ ಅಲಿಯಾಸ್ ಬಾಂಬ್ ನಾರಾಯಣ್ ಎಂದೇ ಕುಖ್ಯಾತನಾಗಿದ್ದ ಈತನ ಬಗ್ಗೆ ವಿವರಗಳನ್ನು ನೀಡಲಾಯಿತು.

ಭೂಕಬಳಿಕೆ, ವಿವಾದಾತ್ಮಕ ಜಮೀನುಗಳ ವ್ಯವಹಾರಗಳಲ್ಲಿ ಈ ಹಂತಕ ಕೈಹಾಕಿದ್ದನಲ್ಲದೇ, ಸರ್ಜಾಪುರ, ಹೊಸೂರು ರಸ್ತೆ, ಹೆಬ್ಬಗೋಡಿ, ಬಾಗೂರು ಪ್ರದೇಶಗಳ ರೈತರಿಗೆ ಸಿಂಹಸ್ವಪ್ನನಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಂಧ್ರದ ಕಡಪದಲ್ಲಿ ಈತನನ್ನು ಹಾಗೂ ಈತನೊಂದಿಗಿದ್ದ 13 ಸಹಚರರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಪಿಸ್ತೂಲು, ಜರ್ಮನ್ ನಿರ್ಮಿತ ರಿವಾಲ್ವರ್, ಅಕ್ರಮ ಕಾರ್ಯಗಳಿಗೆ ಬಳಸಲಾಗುತ್ತಿದ್ದ ಹಲವಾರು ಮೊಬೈಲ್ ಫೋನುಗಳೂ ಸೇರಿದಂತೆ ಇನ್ನೂ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರದೇಶಗಳ ರೈತರನ್ನ ಹೆದರಿಸಿ ಕಡಿಮೆ ಬೆಲೆಗೆ ಭೂಮಿ ಮತ್ತು ಇತರ ಅಸ್ತಿಗಳನ್ನು ಖರೀದಿಸುತ್ತಿದ್ದ ನಾರಾಯಣ, ಚೈನ್ ಸ್ನ್ಯಾಚಿಂಗ್, ಕೊಲೆ ದರೋಡೆಗಳನ್ನು ನಡೆಸುವಲ್ಲಿಯೂ ಪಳಗಿದ್ದ. ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ, ಕೊಲೆ, ಪರೋಕ್ಷವಾಗಿ ಕೊಲೆಯಲ್ಲಿ ಭಾಗಿಯಾಗಿರುವುದೂ ಸೇರಿದಂತೆ ಸುಮಾರು 20 ಪ್ರಕರಣಗಳು ಅವನ ಮೇಲೆ ದಾಖಲಾಗಿದ್ದವು. ಇಷ್ಟಾದರೂ ಆತನನ್ನು ರೌಡಿ ಶೀಟಿನಲ್ಲಿ ಸೇರಿಸದಿರುವುದರ ಔಚಿತ್ಯವೇನು ಎಂಬ ಪ್ರಶ್ನೆಯೀಗ ಎದ್ದಿದೆ.
ಮತ್ತಷ್ಟು
ಬಿಎಸ್‌ಪಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು
ಕಮಲದ ತೆಕ್ಕೆಗೆ ಸರಿದ ಬಚ್ಚೇಗೌಡ
ಪೇಜಾವರ ಶ್ರೀ ಉಪವಾಸ, ಪುತ್ತಿಗೆ ಶ್ರೀ ಅನ್ನತ್ಯಾಗ
ಆಟೊ ಚಾಲಕರಿಂದ ಹೆಚ್ಚಿನ ದರ ವಸೂಲಿ
ಕೃಷ್ಣಮಠ ಪರ್ಯಾಯಕ್ಕೆ ಸಜ್ಜುಗೊಂಡ ಉಡುಪಿ
ಮೈತ್ರಿ ಇಲ್ಲದೆಯೇ ಜೆಡಿಎಸ್ ಅಧಿಕಾರಕ್ಕೆ: ಕುಮಾರ