ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಕ್ಕೆ ಅವಮಾನ ಖಂಡಿಸಿ 27ರಂದು ರೈಲು ತಡೆ
ಕನ್ನಡ ಭಾಷೆಗೆ ಸಿಗದ ಶಾಸ್ತ್ತ್ರೀಯ ಸ್ಥಾನಮಾನ ಹಾಗೂ ರೈಲ್ವೆ ಇಲಾಖೆಯ ನೇಮಕಾತಿಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ಇದೇ ತಿಂಗಳ 27ರಂದು ರಾಜ್ಯಾದ್ಯಂತ ರೈಲು ತಡೆ ನಡೆಸಲು ಅಖಿಲ ಕರ್ನಾಟಕ ಗಡಿ ಹೋರಾಟ ಸಮಿತಿ ನಿರ್ಧರಿಸಿದೆ.

ಬೆಂಗಳೂರು ನಗರವೂ ಸೇರಿದಂತೆ ರಾಜ್ಯದ ಸುಮಾರು 600 ಕಡೆ ರೈಲ್ ಬಂದ್ ನಡೆಸುವ ಮೂಲಕ ಸತ್ಯಾಗ್ರಹ ನಡೆಸಲಾಗುವುದೆಂದು ಸಮಿತಿಯ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಕನ್ನಡದ ಹಾಗೂ ಕನ್ನಡಿಗರ ಹಿತ ಕಾಯುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದ ಅವರು ಕನ್ನಡಕ್ಕೆ ಶಾಸ್ತ್ತ್ರೀಯ ಸ್ಥಾನಮಾನ, ಹೊಸ ರೈಲು ಮಾರ್ಗಗಳು, ವಿವಿಧ ವರದಿಗಳ ಅನುಷ್ಠಾನ ಇವೇ ಮೊದಲಾದ ಅಂಶಗಳು ತಮ್ಮ ಬೇಡಿಕೆಯಲ್ಲಿ ಸೇರಿವೆ ಎಂದು ತಿಳಿಸಿದರು.

ಬೆಂಗಳೂರಿನ ಸಿಟಿ ಮಾರ್ಕೆಟ್ ಪ್ರದೇಶದಲ್ಲಿ ಹರಾಜು ಹಾಕುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾದ ಈ ಸಂದರ್ಭದಲ್ಲಿ ದಲಿತ ಕ್ರಿಯಾ ಸಮಿತಿಯ ಅಧ್ಯಕ್ಷ ಚಿ.ನಾ.ರಾಮು, ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಮೊದಲಾದವರು ಹಾಜರಿದ್ದರು.
ಮತ್ತಷ್ಟು
ಸಿದ್ದು: ಅಂತೂ ಕೊನೆಗೂ ಸ್ಥಾನ ಬಂತೂ..!!
ಪೊಲೀಸರಿಂದ ಕುಖ್ಯಾತ ಹಂತಕನ ಬಂಧನ
ಬಿಎಸ್‌ಪಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು
ಕಮಲದ ತೆಕ್ಕೆಗೆ ಸರಿದ ಬಚ್ಚೇಗೌಡ
ಪೇಜಾವರ ಶ್ರೀ ಉಪವಾಸ, ಪುತ್ತಿಗೆ ಶ್ರೀ ಅನ್ನತ್ಯಾಗ
ಆಟೊ ಚಾಲಕರಿಂದ ಹೆಚ್ಚಿನ ದರ ವಸೂಲಿ