ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೀರಾಗಿ ಕಾಡಿತ್ತು ಮಾಯೆ
ಅಂಡರ್‌ಪಾಸ್ ನಿರ್ಮಾಣಕ್ಕೆ ಮೊದಲ ದಿನವೇ ತೊಡಕು
ನಗರದ ಸಂಚಾರ ಸಮಸ್ಯೆ ಬಗೆಹರಿಸಲು ಅದ್ಯಾವ ಕಾಲವಾಗುವುದೋ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಬಿಬಿಎಂಪಿ ಹಾಕಿಕೊಂಡಿದ್ದ ಮಹತ್ವಾಕಾಂಕ್ಷೀ ಪ್ರಯತ್ನ ಮುಂಜಾಗರೂಕತೆಯ ಕೊರತೆಯಿಂದಾಗಿ ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದೆ.

ಕೇವಲ 72 ಗಂಟೆಗಳಲ್ಲಿ ಅಂಡರ್‌ಪಾಸ್ ನಿರ್ಮಿಸುವ ಮೂಲಕ ಸಂಚಾರಿ ಸಮಸ್ಯೆಗೆ ತೀವ್ರ ಗತಿಯಲ್ಲಿ ಪರಿಹಾರ ಕಂಡುಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯೋಜಿಸಿತು. ಕಾವೇರಿ ಜಂಕ್ಷನ್ ಬಳಿ ನಿನ್ನೆ ಕಾಮಗಾರಿಯೂ ಆರಂಭವಾಯಿತು.

ಆದರೆ ನಿನ್ನೆ ರಾತ್ರಿ ಸುಮಾರು ಹನ್ನೆರಡು ಗಂಟೆಯ ವೇಳೆಯಲ್ಲಿ, ಅಗೆತದ ಜಾಗದಲ್ಲಿ ಹಾದುಹೋಗಿದ್ದ ನೀರು ಸರಬರಾಜು ಕೊಳವೆಗೆ ಹಾನಿಯಾಗಿ ಸಮಸ್ಯೆ ಪ್ರಾರಂಭವಾಯಿತು. ಪರಿಣಾಮ, ಅಗೆದ ಜಾಗದಲ್ಲೆಲ್ಲಾ ನೀರು ತುಂಬಿಕೊಂಡು ಕಾಮಗಾರಿ ಸ್ಥಗಿತಗೊಂಡಿದೆ.

ಕಾಮಗಾರಿ ಪ್ರಾರಂಭಿಸುವ ಮುಂಚೆ ಸದರಿ ಜಾಗದಲ್ಲಿ ಒಳಚರಂಡಿ, ನೀರು ಸರಬರಾಜು ಕೊಳವೆಗಳು ಅಥವಾ ಮತ್ಯಾವುದೇ ಸ್ವರೂಪದ ಕೇಬಲ್‌ಗಳು ಹಾದುಹೋಗಿವೆಯೇ ಎಂಬ ಕುರಿತು ಮಾಹಿತಿ ಪಡೆಯುವುದು ವಾಡಿಕೆ. ಜೊತೆಗೆ ಇಂಥ ಕಾಮಗಾರಿ ನಡೆಯುವಾಗ ನೀರು ಸರಬರಾಜು ಮಂಡಳಿಯೂ ಇಂಥ ಸ್ಥಳದಲ್ಲಿ ನೀರು ಸರಬರಾಜು ಕೊಳವೆ ಹಾದು ಹೋಗಿರುವುದರ ಕುರಿತು ಮಾಹಿತಿ ನೀಡುವುದು ಅಪೇಕ್ಷಣೀಯ. ಆದರೆ ಈ ಎರಡೂ ಪ್ರಕ್ರಿಯೆಗಳು ನಡೆಯದಿರುವುದೇ ಸಮಸ್ಯೆ ಉಂಟಾಗಲು ಕಾರಣವಾಗಿದೆ.

ಇದರ ಪರಿಣಾಮವಾಗಿ, ಸದಾಶಿವನಗರ, ಮಲ್ಲೇಶ್ವರಂ ಸೇರಿದಂತೆ ಬೆಂಗಳೂರು ಉತ್ತರ ವಲಯದ ಅನೇಕ ಕಡೆಗಳಲ್ಲಿ ನೀರು ಮತ್ತು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸಂಚಾರ ದಟ್ಟಣೆಯ ಸಮಸ್ಯೆಗೆ ಮತ್ತೆರಡು ಸಮಸ್ಯೆ ಸೇರಿದಂತಾಗಿದೆ ಎಂಬುದು ನಾಗರಿಕರ ಅಳಲು.
ಮತ್ತಷ್ಟು
ಯಾವ ಪಕ್ಷ ಒಳಿತು?: ಪ್ರಕಾಶ್ ಇಂದು ನಿರ್ಧಾರ
ಕ್ಯಾಂಟರ್ ಡಿಕ್ಕಿಯಿಂದ ಪಾದಚಾರಿಯ ಸಾವು
ಪರ್ಯಾಯ: ಇನ್ನೂ ಪರಿಹಾರವಾಗದ ವಿವಾದ
ಪರ್ಯಾಯೋತ್ಸವಕ್ಕೆ ಅಲಂಕಾರಗೊಂಡಿದೆ ಉಡುಪಿ
ರಾಜ್ಯಕ್ಕೆ ಅವಮಾನ ಖಂಡಿಸಿ 27ರಂದು ರೈಲು ತಡೆ
ಸಿದ್ದು: ಅಂತೂ ಕೊನೆಗೂ ಸ್ಥಾನ ಬಂತೂ..!!