ಡೆಕ್ಕನ್ ಏವಿಯೇಷನ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಒಂದು ತುರ್ತು ಭೂಸ್ಪರ್ಶ ಮಾಡುವ ವೇಳೆ ರೆಕ್ಕೆ ಮುರಿದುಕೊಂಡಿದ್ದರಿಂದ ಉದ್ಯಮಿ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ಮೈಸೂರಿನಿಂದ ವರದಿಯಾಗಿದೆ.
ಮೈಸೂರು ಹೊರವಲಯದ ಇನ್ಫೋಸಿಸ್ ಸಂಸ್ಥೆಯ ಆವರಣದಲ್ಲಿ ಇದು ಸಂಭವಿಸಿದ್ದು ಹೆಲಿಕಾಪ್ಟರಿನಲ್ಲಿದ್ದ ಆಟೋಮೋಟಿವ್ ಏಕ್ಸೆಲ್ಸ್ ಕಂಪನಿ ಅಧ್ಯಕ್ಷ ಬಾಬು ಕಲ್ಯಾಣಿ ಸಹಿತ ನಾಲ್ವರಿಗೆ ಗಾಯಗಳಾಗಿವೆ. ಅವರನ್ನು ಅಪೊಲೋ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚಿನ ತನಿಖೆಗಾಗಿ ಡೆಕ್ಕನ್ ಏವಿಯೇಶನ್ ಸಂಸ್ಥೆಗೆ ಸೇರಿದ ಇಬ್ಬರು ಅಧಿಕಾರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆಂದು ಸುದ್ದಿಮೂಲಗಳು ತಿಳಿಸಿವೆ.
ಅಪಘಾತಕ್ಕೊಳಗಾದ ಹೆಲಿಕಾಪ್ಟರ್ ಅವಶೇಷಗಳು ಇನ್ಫೋಸಿಸ್ ಆವರಣದಲ್ಲೇ ಇದ್ದು, ಕಂಡುಬಂದ ತಾಂತ್ರಿಕ ದೋಷವೇ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ.
|