ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ಕಡೆಗೆ ಬೆಂಗಳೂರಿನಲ್ಲಿ ಶರದ್ ಗಾನ
ಜೆಡಿಯುನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ ಎಂದು ಯಾವ ಪಕ್ಷದ ಬಾಗಿಲಿಗೂ ಹೋಗುವುದಿಲ್ಲ. ಆದರೆ ಬಿಜೆಪಿಯಿಂದ ಆಹ್ವಾನ ಬಂದರೆ, ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಪಕ್ಷ ಪರೀಶೀಲಿಸಲಿದೆ ಎಂದು ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್ ತಿಳಿಸಿದ್ದಾರೆ.

ನಗರದಲ್ಲಿಂದು ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಜೆಡಿಯುಗೆ ಈ ಬಾರಿ ಉತ್ತಮ ಭವಿಷ್ಯವಿರುವುದರಿಂದ ಎಲ್ಲಾ ಜಿಲ್ಲೆಗಳಲ್ಲೂ ಪದಾಧಿಕಾರಿಗಳು ಪ್ರವಾಸ ಮಾಡಿ ಬೇರುಮಟ್ಟದಿಂದ ಪಕ್ಷವನ್ನು ಸದೃಢಗೊಳಿಸುವ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.

ಮಾತೃಪಕ್ಷಕ್ಕೆ ಮೋಸ ಮಾಡಿದ ನಾಯಕರ ಬಗೆಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯತ್ತ ಮುತುವರ್ಜಿಯಿಟ್ಟು ಕೆಲಸ ಮಾಡಿ. ನಿಮ್ಮ ನಿಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಪಕ್ಷದ ವೇದಿಕೆಯಲ್ಲೇ ಚರ್ಚೆ ಮಾಡಿ ಬಗೆ ಹರಿಸಿಕೊಳ್ಳಿ ಎಂದು ಪದಾಧಿಕಾರಿಗಳಿಗೆ ಶರದ್ ಯಾದವ್ ಸೂಚಿಸಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಎಲ್.ಕೆ.ಅಡ್ವಾಣಿಯವರನ್ನು ಈ ಬಾರಿಯ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಲಾಗಿದೆ. ಆದ ಕಾರಣ ಎಲ್ಲಾ ಕಾಂಗ್ರೆಸ್ ವಿರೋಧಿ ಗುಂಪುಗಳನ್ನು ಒಗ್ಗೂಡಿಸಿ ಎನ್.ಡಿ.ಎ.ಯನ್ನು ಬಲಪಡಿಸುವ ಅಗತ್ಯವಿದೆ ಎಂದು ಶರದ್ ಈ ಸಂದರ್ಭದಲ್ಲಿ ಪ್ರತಿಪಾದಿಸಿದರು.
ಮತ್ತಷ್ಟು
ಹೆಲಿಕಾಪ್ಟರ್ ಭೂಸ್ಪರ್ಶ: ಉದ್ಯಮಿ, 3 ಮಂದಿಗೆ ಗಾಯ
ಪರ್ಯಾಯ ಸಂಪ್ರದಾಯದ ಸಾಗರೋಲ್ಲಂಘನೆ!
ಒಡೆದ ಪೈಪ್: ಅಂಡರ್‌‌ಪಾಸ್ ನಿರ್ಮಾಣಕ್ಕೆ ಅಡ್ಡಿ
ಗೋಕಾಕ್ ಮಾರ್ಕೆಟಿನಲ್ಲಿ ಭೀಕರ ಅಗ್ನಿ ಅನಾಹುತ
ಸಂಪ್ರದಾಯ ಮುರಿದು ಪೀಠವೇರಿದ ಪುತ್ತಿಗೆ ಶ್ರೀ
ನವರಾತ್ರಿ ವೇಳೆಗೆ ವಿಶ್ವ ಮಾಧ್ವ ಮಠ: ಪುತ್ತಿಗೆ ಶ್ರೀ