ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಷರತ್ತು ವಿಧಿಸದೆ ಪ್ರಕಾಶ್ ಬರಲಿ: ಖರ್ಗೆ
PTI
ಜೆಡಿಎಸ್ ಬಂಡಾಯ ನಾಯಕ ಎಂ.ಪಿ.ಪ್ರಕಾಶ್‌ರವರ ಮುಂದಿನ ನೆಲೆ ಯಾವುದು ಎಂಬುದು 5 ದಿವಸ ಮುಂಚಿತವಾಗಿಯೇ ಸೂಕ್ಷ್ಮವಾಗಿ ಹೊರಬಿದ್ದಿದೆ. ಪ್ರಕಾಶ್ ಕಾಂಗ್ರೆಸ್ ಸೇರುವುದಾದಲ್ಲಿ ಯಾವುದೇ ಷರತ್ತು ವಿಧಿಸದೆ ಸೇರ್ಪಡೆಯಾಗಲಿ. ಅವರಿಗೆ ನಮ್ಮ ಸ್ವಾಗತವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಈ ಮಾತುಗಳಿಗೆ ಪುಷ್ಟಿ ನೀಡುವಂತಿದೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಪಕ್ಷದ ಹೈಕಮಾಂಡ್ ಸೂಕ್ತ ಸ್ಥಾನಮಾನವನ್ನಂತೂ ನೀಡಲಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಯಾರೇ ಸೇರುವುದಿದ್ದರೂ ಷರತ್ತು ವಿಧಿಸದೆಯೇ ಸೇರಬೇಕು ಎಂದು ಸ್ಪಷ್ಟ ದನಿಯಲ್ಲಿ ನುಡಿದರು.

ಪಕ್ಷದ ವರಿಷ್ಠರೊಂದಿಗೆ ಈಗಾಗಲೇ ಪ್ರಕಾಶ್ ಚರ್ಚೆ ನಡೆಸಿದ್ದು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅವರ ಕೈಯಲ್ಲೇ ಇದೆ ಎಂದು ನುಡಿದ ಖರ್ಗೆ, ಸಿದ್ಧರಾಮಯ್ಯನವರಿಗೆ ಪ್ರಚಾರ ಸಮಿತಿಯ ಅಧ್ಯಕ್ಷತೆ ದೊರೆಯುವುದರ ಕುರಿತು ಸೂಚ್ಯವಾಗಿ ತಿಳಿಸಿದರು.

ಕೆಪಿಸಿಸಿ ಪುನಾರಚನೆಗೆ ಸಂಬಂಧಿಸಿ ತಾವು ಈಗಾಗಲೇ ಪಕ್ಷದ ಹೈಕಮಾಂಡ್ ಜೊತೆಗೆ ಸಮಾಲೋಚನೆ ನಡೆಸಿದ್ದು ಈ ವಾರದೊಳಗಾಗಿ ಅದು ನೆರವೇರಲಿದೆ ಎಂದು ಖರ್ಗೆ ತಿಳಿಸಿದರು.
ಮತ್ತಷ್ಟು
ಬಿಕ್ಕಟ್ಟು ನಿವಾರಣೆಗೆ ರಾಜ್ಯ ಪ್ರವಾಸ: ದೇವೇಗೌಡ
ಬಿಜೆಪಿ ಕಡೆಗೆ ಬೆಂಗಳೂರಿನಲ್ಲಿ ಶರದ್ ಗಾನ
ಹೆಲಿಕಾಪ್ಟರ್ ಭೂಸ್ಪರ್ಶ: ಉದ್ಯಮಿ, 3 ಮಂದಿಗೆ ಗಾಯ
ಪರ್ಯಾಯ ಸಂಪ್ರದಾಯದ ಸಾಗರೋಲ್ಲಂಘನೆ!
ಒಡೆದ ಪೈಪ್: ಅಂಡರ್‌‌ಪಾಸ್ ನಿರ್ಮಾಣಕ್ಕೆ ಅಡ್ಡಿ
ಗೋಕಾಕ್ ಮಾರ್ಕೆಟಿನಲ್ಲಿ ಭೀಕರ ಅಗ್ನಿ ಅನಾಹುತ