ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಕಾಶ್ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತ
NRB
ಮಾಜಿ ಸಚಿವ ಮಹದೇವ್ ಪ್ರಸಾದ್ ನೇತೃತ್ವದಲ್ಲಿ ಪ್ರಕಾಶ್ ಬಣದ ಕೆಲವು ಸದಸ್ಯರು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಮಾತುಕತೆ ನಡೆಸಿದ್ದು, ಪ್ರಕಾಶ್ ಬಣ ಕಾಂಗ್ರೆಸ್ ಸೇರುವುದು ಖಚಿತವಾದಂತಿದೆ.

ಸಭೆಯ ಬಳಿಕ ಮಾತನಾಡಿದ ಮಹದೇವ್ ಪ್ರಸಾದ್, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳು ಹಾಗೂ ಅಭಿಪ್ರಾಯ ತಿಳಿಯುವ ನಿಟ್ಟಿನಲ್ಲಿ ಸಿದ್ದರಾಮಯ್ಯನವರೊಂದಿಗೆ ಮಾತುಕತೆ ನಡೆಸಲಾಗಿದೆ. ಮಾತುಕತೆಯ ವಿವರಗಳನ್ನು ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

ಪ್ರಕಾಶ್ ಬಣದ ಬಹುತೇಕ ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರುವ ಇಂಗಿತವನ್ನು ವ್ಯಕ್ತಪಡಿಸಿದ್ದು, ಈ ಸಂಬಂಧ ಜನವರಿ 22 ಮತ್ತು 23ರಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಪ್ರಕಾಶ್ ಮೊದಲ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಈ ತಿಂಗಳ 27ರಂದು ರಾಜ್ಯಕ್ಕೆ ಪೃಥ್ವಿರಾಜ್ ಚೌಹಾಣ್‌ರವರ ಭೇಟಿಗೆ ಮಹತ್ವ ಬಂದಿದೆ.

ಈ ಹಿಂದೆ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದ ಪ್ರಕಾಶ್ ಕಮಲದ ತೆಕ್ಕೆಗೆ ಹಾರಲಿದ್ದಾರೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು. ಬಣದಲ್ಲಿನ ಕೆಲವು ನಾಯಕರಲ್ಲಿ ಈ ಬಗ್ಗೆ ಅಸಮಾಧಾನ ಕಂಡು ಬಂದಿದ್ದರಿಂದ ಸಂಕ್ರಾಂತಿ ಬಳಿಕದ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಕಾಶ್ ತಮ್ಮ ತತ್ವ ಸಿದ್ದಾಂತಗಳಿಗೆ ಒಪ್ಪುವಂತಹ ಪಕ್ಷವನ್ನು ಆರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿ ಒಂದು ವಾರದಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದರು.
ಮತ್ತಷ್ಟು
ಈ ಹಂತಕ 21 ಮಂದಿಯ ಕೊಲೆಗಾರ!
ಷರತ್ತು ವಿಧಿಸದೆ ಪ್ರಕಾಶ್ ಬರಲಿ: ಖರ್ಗೆ
ಬಿಕ್ಕಟ್ಟು ನಿವಾರಣೆಗೆ ರಾಜ್ಯ ಪ್ರವಾಸ: ದೇವೇಗೌಡ
ಬಿಜೆಪಿ ಕಡೆಗೆ ಬೆಂಗಳೂರಿನಲ್ಲಿ ಶರದ್ ಗಾನ
ಹೆಲಿಕಾಪ್ಟರ್ ಭೂಸ್ಪರ್ಶ: ಉದ್ಯಮಿ, 3 ಮಂದಿಗೆ ಗಾಯ
ಪರ್ಯಾಯ ಸಂಪ್ರದಾಯದ ಸಾಗರೋಲ್ಲಂಘನೆ!