ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೀಳ್ಯ ಕೊಟ್ಟು ಸ್ವಾಗತವಿಲ್ಲ: ಸದಾನಂದ ಗೌಡ
NRB
ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಬಿಜೆಪಿ ಸೇರುವುದಕ್ಕೆ ಸ್ವಾಗತವಿದೆ. ಆದರೆ ಯಾವುದೇ ಕಾರಣಕ್ಕೂ ಪಕ್ಷ ಸೇರುವವರಿಗೆ ಒತ್ತಾಯಪೂರ್ವಕವಾಗಿ ವೀಳ್ಯ ಕೊಟ್ಟು ಆಹ್ವಾನಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಡಿ.ವಿ. ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕ್ಷೇತ್ರ ಪುನರ್ವಿಂಗಡಣಾ ಆಯೋಗದ ವರದಿ ಅನುಷ್ಠಾನದಂತೆ ರಾಜ್ಯದಲ್ಲಿ ಚುನಾವಣೆ ನಡೆದರೂ ಬಿಜೆಪಿ ಎದುರಿಸಲು ಸಿದ್ದವಾಗಿದೆ. ಆದರೆ ಈ ಕಾರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಒಂದು ವಾರದ ಹಿಂದೆ ಪ್ರಕಾಶ್ ಜೊತೆ ಮಾತುಕತೆಯ ಸಂದರ್ಭದಲ್ಲಿ ಈ ತಿಂಗಳ 17ರಂದು ತಮ್ಮ ಬಣದ ಜೊತೆ ಸಭೆ ನಡೆಸಿದ ಬಳಿಕ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದಾಗಿ ಪ್ರಕಾಶ್ ತಿಳಿಸಿದ್ದರು. ಆದರೆ ಇದುವರೆಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಬಿಜೆಪಿಯ ನೀತಿ, ತತ್ವ-ಸಿದ್ದಾಂತಗಳಿಗೆ ಒಪ್ಪಿ ಪ್ರಕಾಶ್ ಬಿಜೆಪಿಗೆ ಬರುವುದಾದರೆ ಸ್ವಾಗತವಿದೆ. ಆದರೆ ಒತ್ತಡ ಹೇರುವುದಿಲ್ಲ ಎಂದು ಅವರು ತಿಳಿಸಿದರು.

ಮೈತ್ರಿ ಸರ್ಕಾರದಲ್ಲಿ ಭ್ರಷ್ಟಾಚಾರವಾಗಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸದಾನಂದ ಗೌಡ, ಯಾವುದೇ ಸುಳ್ಳು ಬೆದರಿಕೆಗೆ ಬಿಜೆಪಿ ಜಗ್ಗುವುದಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಅವ್ಯವಹಾರ ನಡೆದಿದ್ದರೆ ಸಿಬಿಐ ತನಿಖೆಯಾಗಲಿ ಎಂದು ಸವಾಲು ಹಾಕಿದರು.
ಮತ್ತಷ್ಟು
ಬಾಲಗಂಗಾಧರರ ಜನ್ಮದಿನಾಚರಣೆ ಸಂಭ್ರಮ
21 ಕೊಲೆ, ಕೋಟ್ಯಂತರ ರೂ. ವಂಚನೆ ಬಯಲು
ಈ ಹಂತಕ 21 ಮಂದಿಯ ಕೊಲೆಗಾರ!
ಷರತ್ತು ವಿಧಿಸದೆ ಪ್ರಕಾಶ್ ಬರಲಿ: ಖರ್ಗೆ
ಬಿಕ್ಕಟ್ಟು ನಿವಾರಣೆಗೆ ರಾಜ್ಯ ಪ್ರವಾಸ: ದೇವೇಗೌಡ
ಬಿಜೆಪಿ ಕಡೆಗೆ ಬೆಂಗಳೂರಿನಲ್ಲಿ ಶರದ್ ಗಾನ