ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿಗೆ ಬಿ.ಎಸ್.ಯಡಿಯೂರಪ್ಪ ದೌಡು
ನಿಂತ ನೀರಾಗಿದ್ದ ರಾಜಕೀಯಕ್ಕೆ ಚಾಲನೆ
NRB
ಕಳೆದೊಂದು ತಿಂಗಳಿಂದ ನಿಂತ ನೀರಾಗಿದ್ದ ರಾಜ್ಯ ರಾಜಕೀಯಕ್ಕೆ ಈಗ ಮತ್ತೆ ಚಾಲನೆ ಸಿಕ್ಕಿದೆ. ಪಕ್ಷಕ್ಕೆ ಸೇರಲು ಬಯಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೀಗ ಆನೆಬಲ ಬಂದಂತಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಚರ್ಚಿಸುವ ಉದ್ದೇಶದಿಂದ ಅವರು ದೆಹಲಿಗೆ ದೌಡಾಯಿಸಿದ್ದು, ಪಕ್ಷದ ವರಿಷ್ಠರೊಂದಿಗೆ ಕೆಲವೊಂದು ಗಂಭೀರ ವಿಷಯಗಳನ್ನು ಚಿರ್ಚಿಸಲಿದ್ದಾರೆಂದು ಸುದ್ದಿ ಮೂಲಗಳು ತಿಳಿಸಿವೆ.

ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವಲ್ಲಿ ಬಿಎಸ್ಪಿ ದಿನೇ ದಿನೇ ಮಾಡುತ್ತಿರುವ ಪ್ರಯತ್ನಗಳು, ಮಾಜಿ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿಸಲು ನಡೆಸಿರುವ ಪ್ರಯತ್ನಗಳು ಇವನ್ನೆಲ್ಲಾ ಗಮನಿಸಿರುವ ಯಡಿಯೂರಪ್ಪ, ಮುಂಬರುವ ಚುನಾವಣೆಗೆ ರೂಪಿಸಬೇಕಾದ ರಣನೀತಿಯ ಕುರಿತು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಿದ್ದಾರೆಂದು ತಿಳಿದುಬಂದಿದೆ.

ಪಕ್ಷದ ಪ್ರಬಲ ಎದುರಾಳಿಯಾದ ಜೆಡಿಎಸ್‌ನಿಂದ ಒಂದೊಂದೇ ಪ್ರಮುಖ ತಲೆಗಳು ಕಾಂಗ್ರೆಸ್ ಅಥವಾ ಬಿಜೆಪಿ ಕಡೆ ಮುಖ ಮಾಡಿ ನಿಂತಿವೆ. ಎಂ.ಪಿ.ಪ್ರಕಾಶ್ ಬಣದ ಕೆಲವರು ಈಗಾಗಲೇ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಜೆಡಿಎಸ್ ದುರ್ಬಲ ಪರಿಸ್ಥಿತಿಯ ಸದುಪಯೋಗವನ್ನು ಈಗ ಪಡೆದುಕೊಳ್ಳದಿದ್ದರೆ ಮುಂದೆ ಪಕ್ಷವನ್ನು ಸುಸ್ಥಿರವಾಗಿ ಸ್ಥಾಪಿಸುವುದು ಕಷ್ಟ ಎಂಬ ಅರಿವು ಯಡಿಯೂರಪ್ಪನವರಿಗಿರುವುದರಿಂದ ಅವರು ವರಿಷ್ಠರೊಂದಿಗೆ ಏನನ್ನು ಚರ್ಚಿಸಲಿದ್ದಾರೆ? ಅಲ್ಲಿಂದ ಯಾವ ಆದೇಶಗಳನ್ನು ಹೊತ್ತು ತರಲಿದ್ದಾರೆ ಎಂಬ ಕಡೆಯೇ ಎಲ್ಲರ ಕುತೂಹಲದ ಕಣ್ಣುಗಳೂ ನೆಟ್ಟಿವೆ.
ಮತ್ತಷ್ಟು
ವೀಳ್ಯ ಕೊಟ್ಟು ಸ್ವಾಗತವಿಲ್ಲ: ಸದಾನಂದ ಗೌಡ
ಬಾಲಗಂಗಾಧರರ ಜನ್ಮದಿನಾಚರಣೆ ಸಂಭ್ರಮ
21 ಕೊಲೆ, ಕೋಟ್ಯಂತರ ರೂ. ವಂಚನೆ ಬಯಲು
ಈ ಹಂತಕ 21 ಮಂದಿಯ ಕೊಲೆಗಾರ!
ಷರತ್ತು ವಿಧಿಸದೆ ಪ್ರಕಾಶ್ ಬರಲಿ: ಖರ್ಗೆ
ಬಿಕ್ಕಟ್ಟು ನಿವಾರಣೆಗೆ ರಾಜ್ಯ ಪ್ರವಾಸ: ದೇವೇಗೌಡ