ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತದಾರರ ಪಟ್ಟಿ ಸಿದ್ದತೆಯ ನಂತರ ಚುನಾವಣೆ
ರಾಜ್ಯ ವಿಧಾನಸಭಾ ಚುನಾವಣೆಯನ್ನು ನಡೆಸುವ ಮುನ್ನ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಸ್ವಚ್ಛಗೊಳಿಸಬೇಕೆಂದು ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಬೃಹತ್ ಜನಾಂದೋಲನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟಾರೆಯಾಗಿ 33 ಲಕ್ಷ ಕೋಟಿ ಮತದಾರರಿರುವುದನ್ನು ಚುನಾವಣಾ ಆಯೋಗ ಮೊದಲ ಹಂತದಲ್ಲಿ ಪತ್ತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬಡವರು ಮತ್ತು ಕೂಲಿಕಾರ್ಮಿಕರಿಗೆ ಮತದಾನದ ಹಕ್ಕು ಸಿಗಬೇಕು ಎಂದು ಒತ್ತಾಯಿಸಿ, ಕಾಂಗ್ರೆಸ್ ಪಕ್ಷ ಈಗಾಗಲೇ ಚುನಾವಣೆಗೆ ಸಿದ್ದತೆ ನಡೆಸಿದೆ. ಆದರೆ ಚುನಾವಣೆಗೆ ಮುನ್ನ ಮತದಾರರ ಪಟ್ಟಿ ಸ್ವಚ್ಛವಾಗಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿನ ಸಮ್ಮಿಶ್ರ ಸರಕಾರ ಉರುಳಲು ಬಿಜೆಪಿಯೇ ಕಾರಣ. ದೇವೇಗೌಡರೊಂದಿಗೆ ಖಾತೆ ಹಂಚಿಕೆಯ ವಿಷಯದಲ್ಲಿ ಒಮ್ಮತ ಮೂಡದ ಕಾರಣ ಸರಕಾರ ಉರುಳಿ ಬಿತ್ತು. ಅಧಿಕಾರ ಮತ್ತು ಹಣಕ್ಕಾಗಿ ಸರಕಾರವನ್ನೇ ಬಲಿ ನೀಡಿದ್ದಾರೆ. ಜನರು ಇವರಿಗೆ ಸರಿಯಾದ ಪಾಠ ಕಲಿಸಬೇಕೆಂದು ಖರ್ಗೆ ಕರೆ ನೀಡಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಯುವಕರಿಗೆ ಮಾಸಿಕ 1000ರೂ. ಸ್ಪೆಫಂಡ್ ನೀಡುವುದು. ಅಲ್ಲದೆ, ಈ ಹಿಂದಿನ ಕಾರ್ಯಕ್ರಮದಂತೆ ಒಂದು ಕೆ.ಜಿ. ಅಕ್ಕಿಯನ್ನು 3 ರೂಪಾಯಿಯಲ್ಲಿ ಜನರಿಗೆ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಯಿಲಿ, ಗಣಿ ಮಾಲೀಕರ ಕೃಪೆಯಿಂದ ಜೆಡಿಎಸ್-ಬಿಜೆಪಿ ಸರಕಾರ ರಚನೆಯಾದರೂ, ಅವರಿಂದಲೇ ಉರುಳಿಬಿದ್ದಿದೆ. ಕೇಂದ್ರವು ರಾಜ್ಯದಲ್ಲಿ ಸರ್ಕಾರ ರಚಿಸಲು ಎರಡು ಬಾರಿ ಅವಕಾಶ ನೀಡಿದೆ. ಆದರೆ ಅಧಿಕಾರದ ದುರಾಸೆಯಿಂದ ರಾಜ್ಯದ ಜನತೆ ದ್ರೋಹವೆಸಗಿದ್ದಾರೆ ಎಂದು ಟೀಕಿಸಿದರು.
ಮತ್ತಷ್ಟು
ಕನ್ನಡಿಗರ ನಿರ್ಲಕ್ಷ್ಯ;ರೈಲು ತಡೆ
ವೇಗ ನಿಯಂತ್ರಕ; ಅನಿರ್ಧಿಷ್ಟಾವಧಿ ಲಾರಿ ಮುಷ್ಕರ
ಬಾಲಗಂಗಾಧರನಾಥ ಸ್ವಾಮೀಜಿ: ಕಲಾಂ ಶ್ಲಾಘನೆ
ಗೌಡರ ಕುತಂತ್ರ ಫಲಿಸದು: ಜಿ.ಟಿ.ದೇವೇಗೌಡ
ದೆಹಲಿಗೆ ಬಿ.ಎಸ್.ಯಡಿಯೂರಪ್ಪ ದೌಡು
ವೀಳ್ಯ ಕೊಟ್ಟು ಸ್ವಾಗತವಿಲ್ಲ: ಸದಾನಂದ ಗೌಡ