ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಟೋ ಚಾಲಕರಿಂದ ರಾಜಭವನ ಚಲೋ
ಆಟೊ ಮೀಟರ್ ದರ ಪರಿಷ್ಕರಣೆ ಹಾಗೂ ಎಲ್ಪಿಜಿ ದರ ಇಳಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ಸಿಐಟಿಯು) ಜನವರಿ 30ರಂದು ರಾಜಭವನ ಚಲೋ ನಡೆಸಲು ತೀರ್ಮಾನಿಸಿದೆ.

ಈ ವಿಷಯವನ್ನು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದ ಸಂಘದ ಅಧ್ಯಕ್ಷರಾದ ಮೀನಾಕ್ಷಿ ಸುಂದರಂರವರು, ಬೇಡಿಕೆಯನ್ನು ಈಡೇರಿಸುವಂತೆ ಈ ತಿಂಗಳ 31ರಂದು ನಗರದ ಬನಪ್ಪ ಪಾರ್ಕ್‌ನಲ್ಲಿ ಆಟೋ ಚಾಲಕರ ಸಂಘವು ಸರದಿಯಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ನಿರ್ಧರಿಸಿದೆ. ಈ ಧರಣಿಯಲ್ಲಿ ನಗರದ ನಾಲ್ಕು ವಿಭಾಗಗಳ 60 ಘಟಕಗಳು ಭಾಗವಹಿಸಲಿವೆ ಎಂದು ತಿಳಿಸಿದರು.

ಪ್ರಸ್ತುತವಿರುವ ಎಲ್ಪಿಜಿ ದರವನ್ನು ಇಳಿಸಬೇಕು. ಅಲ್ಲದೆ, ಪ್ರತಿ ಕಿಲೋ ಮೀಟರ್‌ಗೆ 6 ರೂ.ಗಳಾಗಿವೆ. ಈ ದರವನ್ನು 10ರೂ.ಗಳಿಗೆ ಹೆಚ್ಚಿಸಬೇಕು. ಇದಲ್ಲದೆ, ಕನಿಷ್ಠ ದರ ಈಗಿರುವ 12 ರೂ.ಗಳಿಂದ 20 ರೂ.ಗಳಿಗೆ ಏರಿಸುವ ಬಗ್ಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.

ಆಟೋ ಚಾಲಕರ ಕಲ್ಯಾಣ ಮಂಡಳಿ ರಚನೆ, ಪ್ರತ್ಯೇಕ ಕಾಲೋನಿ ನಿರ್ಮಾಣ, ಇಎಸ್ಐ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಚಾಲಕರ ಸಂಘ ಮುಂದಿಟ್ಟಿದೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಆಟೋ ಚಾಲಕ ಸಂಘದ ಉಪಾಧ್ಯಕ್ಷ ಕೆ.ಎನ್. ಉಮೇಶ್, ರುದ್ರಮೂರ್ತಿ, ಟಿ.ಎನ್. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಉಪಸ್ಥಿತರಿದ್ದರು.
ಮತ್ತಷ್ಟು
ಮತದಾರರ ಪಟ್ಟಿ ಸಿದ್ದತೆಯ ನಂತರ ಚುನಾವಣೆ
ಕನ್ನಡಿಗರ ನಿರ್ಲಕ್ಷ್ಯ;ರೈಲು ತಡೆ
ವೇಗ ನಿಯಂತ್ರಕ; ಅನಿರ್ಧಿಷ್ಟಾವಧಿ ಲಾರಿ ಮುಷ್ಕರ
ಬಾಲಗಂಗಾಧರನಾಥ ಸ್ವಾಮೀಜಿ: ಕಲಾಂ ಶ್ಲಾಘನೆ
ಗೌಡರ ಕುತಂತ್ರ ಫಲಿಸದು: ಜಿ.ಟಿ.ದೇವೇಗೌಡ
ದೆಹಲಿಗೆ ಬಿ.ಎಸ್.ಯಡಿಯೂರಪ್ಪ ದೌಡು