ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಪು ಆಯೋಜಿಸಿದ್ದ ಸಭೆಯಲ್ಲಿ ಗದ್ದಲ
ಸಂಸದರ, ಗೈರು, ಹಾಜರಿ , ಕರವೇ ,ಕಾರ್ಯಕರ್ತರ ,ಆಕ್ರೋಶ
ರೈಲ್ವೆ ಇಲಾಖೆಯ ಡಿ ಗ್ರೂಪ್ ಹುದ್ದೆಯಲ್ಲಿ ಕನ್ನಡಿಗರನ್ನು ಕಡೆಗೆಣಿಸಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಪಾಟೀಲ್ ಪುಟ್ಟಪ್ಪ ನೇತೃತ್ವದಲ್ಲಿ ನಗರದಲ್ಲಿ ನಡೆದ ಸಂಸದರ ಸಭೆಗೆ ಕರ್ನಾಟಕ ರಕ್ಷಣಾ ಕಾರ್ಯಕರ್ತರು ನುಗ್ಗಿ ಧಾಂದಲೆ ನಡೆಸಿದರು.

ಹಲವು ದಿನಗಳಲ್ಲಿ ನಡೆಸುತ್ತಿರುವ ರೈಲ್ವೆ ನೇಮಕಾತಿ ಹೋರಾಟಕ್ಕೆ ಸಂಸದರು ಬೆಂಬಲ ಸೂಚಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪಾಟೀಲ್ ಪುಟ್ಟಪ್ಪನವರ ನೇತೃತ್ವದಲ್ಲಿ ಭಾನುವಾರ ಸಭೆ ನಡೆಸಲಾಗಿತ್ತು. ಆದರೆ ಉತ್ತರ ಭಾಗದ ಕೆಲವೇ ಸಂಸದರು ಭಾಗವಹಿಸಿದ್ದು ಕರವೇ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.

ಸಭೆಯಲ್ಲಿ ಪಾಲಿಕೆ ಸದಸ್ಯರು ಹಾಗೂ ಉತ್ತರ ಭಾಗದ ನಾಲ್ಕು ಜನ ಸಂಸದರು ಮಾತ್ರ ಭಾಗವಹಿಸಿದ್ದನ್ನು ಕಂಡು ಕೆರಳಿದ ಕರವೇ ಕಾರ್ಯಕರ್ತರು ಸಭೆಗೆ ಅಡ್ಡಿ ಪಡಿಸಿ ಯಾವ ಸಂಸದರು ಜನರ ಆಶೋತ್ತರಗಳಿಗೆ ಸ್ಪಂದಿಸುವುದಿಲ್ಲ, ಸಭೆಯಲ್ಲಿ ಭಾಗವಹಿಸದಿರುವ ಸಂಸದರ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುವುದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಜನವರಿ 4ರಿಂದಲೇ ತಮ್ಮ ಹೋರಾಟವನ್ನು ಆರಂಭಿಸಿದ್ದರು. ಇದಕ್ಕೆ ರಾಜ್ಯಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿತ್ತು. ಹುಬ್ಬಳ್ಳಿ ಧಾರವಾಡಗಳಲ್ಲಿಯೂ ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ತಮ್ಮ ಬೆಂಬಲ ವ್ಯಕ್ತವಾಗಿತ್ತು.

ಆದರೆ ಈ ಹೋರಾಟಕ್ಕೆ ಸಂಸದರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಆಕ್ರೋಶ ಅಲ್ಲಲ್ಲಿ ಕೇಳಿ ಬಂದಿತ್ತು. ಇದು ಕರವೇ ಕಾರ್ಯಕರ್ತರ ಕೆಂಗಣ್ಣಿಗೂ ಗುರಿಯಾಗಿತ್ತು. ಅದಕ್ಕೆ ಸರಿಯಾಗಿ ಭಾನುವಾರ ನಡೆದ ಸಭೆಯಲ್ಲಿ ಸಂಸದರು ಗೈರು ಹಾಜರಿಯಿಂದ ರೋಷಗೊಂಡ ಕರವೇ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಏಕಾಏಕಿ ನಡೆಯುತ್ತಿದ್ದ ಸಭೆಗೆ ಆಗಮಿಸಿದ ಕರವೇ ಕಾರ್ಯಕರ್ತರು ಗದ್ದಲವೆಬ್ಬಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಗಮನಿಸಿದ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾತಾವರಣವನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು.
ಮತ್ತಷ್ಟು
ಬಾಲಕ ಬಲಿ ; ಉದ್ರಿಕ್ತರಿಂದ ಬಸ್‌ಗಳಿಗೆ ಕಲ್ಲೆಟು
ಆಟೋ ಚಾಲಕರಿಂದ ರಾಜಭವನ ಚಲೋ
ಮತದಾರರ ಪಟ್ಟಿ ಸಿದ್ದತೆಯ ನಂತರ ಚುನಾವಣೆ
ಕನ್ನಡಿಗರ ನಿರ್ಲಕ್ಷ್ಯ;ರೈಲು ತಡೆ
ವೇಗ ನಿಯಂತ್ರಕ; ಅನಿರ್ಧಿಷ್ಟಾವಧಿ ಲಾರಿ ಮುಷ್ಕರ
ಬಾಲಗಂಗಾಧರನಾಥ ಸ್ವಾಮೀಜಿ: ಕಲಾಂ ಶ್ಲಾಘನೆ