ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೈ ಪಾಲಾಗಲಿರುವ ಸಿದ್ದು ಬೆಂಬಲಿಗರು
NRB
ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜೊತೆ ಗುರುತಿಸಿಕೊಂಡಿರುವ 8 ಮಂದಿ ಮಾಜಿ ಶಾಸಕರು ಈ ಮಾಸಾಂತ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಧ್ಯುಕ್ತವಾಗಿ ಸೇರಲಿದ್ದಾರೆ. ಅಲ್ಲಿಗೆ, ಮುಂಬರಲಿರುವ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಪಕ್ಷವು ಹಂತ ಹಂತವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರವಾದಂತಾಗಿದೆ.

ಈ ತಿಂಗಳ 27ಕ್ಕೆ ಪೃಥ್ವೀರಾಜ್ ಚೌಹಾಣ್‌ರವರು ಬೆಂಗಳೂರಿಗೆ ಬರಲಿದ್ದು ಅವರ ಸಮ್ಮುಖದಲ್ಲಿ ಬಿ.ಆರ್.ಪಾಟೀಲ್, ಹುಲ್ಲಪ್ಪ ಮೇಟಿ, ವೈಜನಾಥ್ ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪ, ಸೋಮಶೇಖರ, ವೆಂಕಟೇಶ, ಮಂಚನಹಳ್ಳಿ ಮಹಾದೇವ, ಕೆ.ಎಂ.ಕೃಷ್ಣಮೂರ್ತಿರವರುಗಳು ಕಾಂಗ್ರೆಸ್‍ಗೆ ಸೇರಲಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.

ತಮ್ಮೊಂದಿಗೆ ಪಕ್ಷಕ್ಕೆ ಬರುವವವರಿಗೆ ಟಿಕೆಟ್ ನೀಡಬೇಕು. ಇದರ ಹೊರತಾಗಿ ಇನ್ನೇನೂ ಬೇಡ ಎಂಬ ಷರತ್ತನ್ನು ಸಿದ್ಧರಾಮಯ್ಯನವರು ಈಗಾಗಲೇ ವಿಧಿಸಿದ್ದು, ಅದಕ್ಕೆ ಪಕ್ಷ ಒಪ್ಪಿರುವುದರಿಂದಲೇ ಈ ಸೇರ್ಪಡೆಯ ವೇದಿಕೆ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.

ರಾಜಕೀಯ ಇಚ್ಛಾಶಕ್ತಿ ಇಲ್ಲದ ದೇವೇಗೌಡರ ವಿರುದ್ಧ ಹಾಗೂ ಅವರು ಪ್ರತಿನಿಧಿಸುವ ಜೆಡಿಎಸ್ ಪಕ್ಷದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಸಂಕಲ್ಪ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಿದ್ಧರಾಮಯ್ಯ ಬಣದ ಈ ಮಾಜಿ ಶಾಸಕರು ತಿಳಿಸಿದ್ದಾರೆ.
ಮತ್ತಷ್ಟು
ಲಾರಿ ಮುಷ್ಕರ 2ನೇ ದಿನಕ್ಕೆ: ದ.ಕ. ಅಬಾಧಿತ
ಕೇಂದ್ರದ ನಿರ್ಲಕ್ಷ್ಯ ಧೋರಣೆ: ಬಿಜೆಪಿ ಪ್ರತಿಭಟನೆ
ಸಾಗಣೆದಾರರ ಮುಷ್ಕರ: ಜನಸಾಮಾನ್ಯರಿಗೆ ಬಿಸಿ
ಅಕ್ರಮ, ಅಶ್ಲೀಲ ಸಿ.ಡಿ. ಜಾಲ ಬಯಲಿಗೆ
ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲರೂ ಸಮಾನರು
ಬೆಡಗು ಬಿನ್ನಾಣ ತೋರಿದ ಶ್ವಾನಪಡೆ