ಗುಲ್ಬರ್ಗಾ-ಬಿಜಾಪುರ ಜಿಲ್ಲೆಯ ಮಧ್ಯ ಬರುವ ಜೇವರ್ಗಿ ತಾಲೂಕಿನ ಹಾರವಾಳ ಸಮೀಪ ಎರಡು ಲಾರಿ ಡಿಕ್ಕಿಯಾದ ಪರಿಣಾಮ ಒಬ್ಬ ಕಾರ್ಮಿಕ ಸ್ಥಳದಲ್ಲಿ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಈ ಅಪಘಾತದ ಪರಿಣಾಮವಾಗಿ ಓರ್ವ ಗಾಯಗೊಂಡಿದ್ದಾನೆ. ಜೇವರ್ಗಿ ಹೆದ್ದಾರಿಯಲ್ಲಿ ಆಗಿಂದಾಗ್ಗೆ ಅಪಘಾತಗಳು ಆಗುತ್ತಲೇ ಇರುತ್ತವೆ. ಇಷ್ಟಾದರೂ, ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡುವ ಕುರಿತು ಮನಸ್ಸು ಮಾಡುವುದೇ ಇಲ್ಲ ಎಂದು ಉದ್ವಿಗ್ನಗೊಂಡ ಸ್ಥಳೀಯರು ಪ್ರತಿಭಟನೆಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಅನೇಕ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದು, ಅಪಘಾತಗಳನ್ನು ತಡೆಗಟ್ಟಲು ಸೂಕ್ತವಾದ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಈಗಾಗಲೇ ಜೇವರ್ಗಿ ಹೆದ್ದಾರಿಯಲ್ಲಿ ಬಿಗುವಿನ ವಾತಾವರಣ ಕಂಡುಬಂದಿದೆ. ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರೀಶೀಲನೆ ನಡೆಸಿದ್ದಾರೆ.
|