ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿಲ್ಲದ ವಾಹನ ಮುಷ್ಕರ: ಹೆಚ್ಚುತ್ತಿರುವ ಅತೃಪ್ತಿ
ವೇಗ ನಿಯಂತ್ರಕಗಳ ಅಳವಡಿಕೆಯನ್ನು ವಿರೋಧಿಸಿ ಸಾರಿಗೆ ಮತ್ತು ಸರಕು ಸಾಗಣೆ ವಾಹನಗಳ ಮಾಲೀಕರು ನಡೆಸುತ್ತಿರುವ ಮುಷ್ಕರಕ್ಕೆ ಈಗ ಮ್ಯಾಕ್ಸಿ ಕ್ಯಾಬ್ ಮಾಲೀಕರೂ ಬೆಂಬಲ ನೀಡಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಸದಾ ಗಿಜಿಗುಟ್ಟುತ್ತಿದ್ದ ಹೊಸೂರು ರಸ್ತೆ ಇಂದು (ಮಂಗಳವಾರ) ಮ್ಯಾಕ್ಸಿಕ್ಯಾಬ್‌ಗಳಿಲ್ಲದೇ ಭಣಗುಡುತ್ತಿದ್ದು ಮುಷ್ಕರದ ಬಿಸಿಯ ಪರಮಾವಧಿಯನ್ನು ಸಾರಿ ಹೇಳುತ್ತಿತ್ತು. ಇದುವರೆಗೂ ಕಾಲ್ ಸೆಂಟರ್ ಹಾಗೂ ಐಟಿ-ಬಿಟಿ ಸಂಸ್ಥೆಗಳ ಉದ್ಯೋಗಿಗಳು ಮ್ಯಾಕ್ಸಿಕ್ಯಾಬ್‌ಗಳನ್ನೇ ಅವಲಂಬಿಸಿದ್ದರು. ಆದರೆ ಈ ಹೊಸ ಬೆಳವಣಿಗೆಯಿಂದಾಗಿ ಅವರಲ್ಲಿ ಪರದಾಟ ಶುರುವಾಗಿದ್ದು, ಬಿಎಂಟಿಸಿ ಬಸ್ಸು ಇಲ್ಲವೇ ಆಟೋಗಳಿಗಾಗಿ ಅವರು ಕಾಯುತ್ತಿದ್ದ ದೃಶ್ಯ ಇಂದು ಸಾಮಾನ್ಯವಾಗಿತ್ತು. ಇದರಿಂದಾಗಿ ಆಟೋ ಪ್ರಯಾಣಿಕರು ಹೇಳಿದ ದರವನ್ನೇ ಕೊಟ್ಟು ಹೋಗಬೇಕಾದ ಪರಿಸ್ಥಿತಿ ಕಂಡುಬಂತು.

ಕೆಲ ಕಂಪನಿಗಳು ಬಿಎಂಟಿಸಿ ಬಸ್ಸುಗಳನ್ನು ಗುತ್ತಿಗೆ ಪಡೆದು ತಮ್ಮ ಉದ್ಯೋಗಿಗಳ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದರೆ, ಇನ್ನು ಕೆಲವು ಇದರ ಗೋಜಿಗೇ ಹೋಗಲಿಲ್ಲ. ಇದರಿಂದ ವ್ಯಗ್ರರಾದಂತೆ ಕಂಡು ಬಂದ ಕೆಲ ಉದ್ಯೋಗಸ್ಥರು ಆದಷ್ಟು ಬೇಗ ಈ ಮುಷ್ಕರ ನಿಂತರೆ ಸಾಕಾಗಿದೆ ಎಂದು ಹೇಳುತ್ತಿದ್ದುದು ಸಾಮಾನ್ಯವಾಗಿತ್ತು.

ಮೈಸೂರು ವರದಿ:

ಸರಕು ಮತ್ತು ಸಾರಿಗೆ ವಾಹನಗಳ ಮುಷ್ಕರದ ಬಿಸಿ ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ಕಾರ್ಯಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡಿದೆ. ಇದರಿಂದಾಗಿ ತರಕಾರಿ ಆವಕದಲ್ಲಿ ಕುಸಿತ ಉಂಟಾಗಿದೆ. ಹೆಚ್ಚಿನ ಪಾಲು ಕೇರಳ ಮತ್ತು ತಮಿಳುನಾಡು ಭಾಗಗಳಿಂದ ತರಕಾರಿ ಖರೀದಿ ನಡೆಯುತ್ತಿದ್ದು ಈಗ ಅದೂ ಇಲ್ಲ ಎನ್ನುವಂತಾಗಿದೆ. ಇದರೊಂದಿಗೆ ತರಕಾರಿ ರಫ್ತೂ ಕುಸಿದಿದ್ದು ಇಲ್ಲಿನ ರೈತ ಸಮುದಾಯವನ್ನು ತೀವ್ರ ಆತಂಕದಲ್ಲಿ ಮುಳುಗಿಸಿದೆ.

ಕೇವಲ ರೈತ ಸಮುದಾಯ ಮಾತ್ರವಲ್ಲದೇ ದಲ್ಲಾಳಿಗಳು, ಕೂಲಿ ಕಾರ್ಮಿಕರೂ ಕೈಕಟ್ಟಿ ಕೂರಬೇಕಾದ ಪರಿಸ್ಥಿತಿ ಬಂದಿದ್ದು ಸುಮಾರು 40 ಲಕ್ಷ ರೂ.ನಷ್ಟು ವಹಿವಾಟು ನಡೆಸುತ್ತಿದ್ದ ಮಾರುಕಟ್ಟೆಯ ತಳಹದಿಯೇ ಕುಸಿದಂತಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.

ಈ ನಿಟ್ಟಿನಲ್ಲಿ ಇಂದು (ಮಂಗಳವಾರ) ಸಂಜೆ ನಡೆಯಬೇಕಿರುವ ಸಂಧಾನ ಮಾತುಕತೆಗಳು ಸಫಲವಾಗಿ ಬಿಕ್ಕಟ್ಟು ಆದಷ್ಟು ಬೇಗ ಪರಿಹಾರವಾಗಲಿ ಎಂದು ಜನ ಸಮುದಾಯ ಆಶಿಸುತ್ತಿರುವುದು ಮೈಸೂರಿನಲ್ಲಿ ಕಂಡುಬಂದ ಸಾಮಾನ್ಯ ದೃಶ್ಯವಾಗಿತ್ತು ಎಂದು ತಿಳಿದುಬಂದಿದೆ.
ಮತ್ತಷ್ಟು
ಎರಡು ಲಾರಿಗಳ ಡಿಕ್ಕಿ: ಒಬ್ಬನ ಸಾವು
ಸರಕು ಸಾರಿಗೆ ಮುಷ್ಕರ: ಕೃ.ಉ.ಮಾ.ಗೆ ತಟ್ಟಿದ ಬಿಸಿ
ಕಾಂಗ್ರೆಸ್ ಸೇರಲು ಪ್ರಕಾಶ್‌ಗೆ ಗ್ರೀನ್ ಸಿಗ್ನಲ್
ಕೈ ಪಾಲಾಗಲಿರುವ ಸಿದ್ದು ಬೆಂಬಲಿಗರು
ಲಾರಿ ಮುಷ್ಕರ 2ನೇ ದಿನಕ್ಕೆ: ದ.ಕ. ಅಬಾಧಿತ
ಕೇಂದ್ರದ ನಿರ್ಲಕ್ಷ್ಯ ಧೋರಣೆ: ಬಿಜೆಪಿ ಪ್ರತಿಭಟನೆ