ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮುಂದುವರಿಕೆ
ಫೆಬ್ರವರಿ 10ರಿಂದ ಎರಡನೇ ಇನ್ನಿಂಗ್ಸ್
ND
ಹೃದಯ ಶಸ್ತ್ತ್ರಚಿಕಿತ್ಸೆ ಬಳಿಕ ಮತ್ತೆ ರಾಜಕೀಯ ಪ್ರವೇಶ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಫೆಬ್ರವರಿ 10ರಿಂದ ತಮ್ಮ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮುಂದುವರೆಸಲಿದ್ದಾರೆ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತಾ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಕರ್ನಾಟಕದ ಬಹುತೇಕ ಭಾಗಗಳ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಾರಿ ನಕ್ಸಲ್ ಪೀಡಿತ ಪ್ರದೇಶವಾದ ಶೃಂಗೇರಿ ತಾಲೂಕಿನ ಬೆಜ್ಜುವಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಮಲೆನಾಡಿನ ನಕ್ಸಲ್ ಪ್ರಭಾವಿತ ಪ್ರದೇಶಗಳ ಕುಂದುಕೊರತೆಗಳನ್ನು ಪರಿಶೀಲಿಸಿ, ಈ ಭಾಗದ ಜನರಿಗೆ ಅನುಕೂಲವಾಗುವಂತಹ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಬಗ್ಗೆ ಜೆಡಿಎಸ್ ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಾಗುವುದು. ಇದುವರೆಗೆ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಜೆಡಿಎಸ್ ಮಾಡಿ ತೋರಿಸಿದೆ. ಅಲ್ಲದೆ ಹಿಂದಿನ ಮುಖ್ಯಮಂತ್ರಿಗಳ ಕಾರ್ಯಕ್ರಮದ ಸ್ಫೂರ್ತಿಯೇ ಇಂದಿನ ರಾಜ್ಯಪಾಲರ ಜನತಾ ದರ್ಶನ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಮೂಡಿಗೆರೆ ತಾಲೂಕಿನ ಬೈರಾಪುರದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜುಲೈನಲ್ಲಿ ಕೊಪ್ಪ ತಾಲ್ಲೂಕು ಹತ್ಯಡ್ಕದಲ್ಲಿ ಹತ್ಯೆಗೊಳಗಾಗಿರುವ ರಾಮೇಗೌಡ್ಲು-ಕಾವೇರಮ್ಮ ದಂಪತಿಗಳ ಪುತ್ರನಾದ ಆದರ್ಶನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಪಕ್ಷದ ವತಿಯಿಂದ 25ಲಕ್ಷ ರೂ.ಗಳ ಚೆಕ್ಕು ವಿತರಿಸಲಾಗುವುದು ಎಂದು ತಿಳಿಸಿದರು.
ಮತ್ತಷ್ಟು
ಶ್ರೀಕೃಷ್ಣ ಪೂಜೆಗೆ ಸಹಕಾರ: ಕರಗಿತು ವಿವಾದ
ಜೆಡಿಎಸ್ ಮಡಿಲಿಗೆ ತರಲು ಬಚ್ಚೇಗೌಡರ ಭೇಟಿ
ನಿಲ್ಲದ ವಾಹನ ಮುಷ್ಕರ: ಹೆಚ್ಚುತ್ತಿರುವ ಅತೃಪ್ತಿ
ಎರಡು ಲಾರಿಗಳ ಡಿಕ್ಕಿ: ಒಬ್ಬನ ಸಾವು
ಸರಕು ಸಾರಿಗೆ ಮುಷ್ಕರ: ಕೃ.ಉ.ಮಾ.ಗೆ ತಟ್ಟಿದ ಬಿಸಿ
ಕಾಂಗ್ರೆಸ್ ಸೇರಲು ಪ್ರಕಾಶ್‌ಗೆ ಗ್ರೀನ್ ಸಿಗ್ನಲ್