ಮೇ ಅಂತ್ಯದಲ್ಲಿ ನಡೆಯಬೇಕಾದ ಕರ್ನಾಟಕ ವಿಧಾನಸಭೆ ಚುನಾವಣೆ ಮುಂದೂಡುವ ಯಾವುದೇ ಸಂಚು ಅಳವಡಿಸುವುದಕ್ಕೆ ಬಿಜೆಪಿ ಮಂಗಳವಾರ ವಿರೋಧ ವ್ಯಕ್ತಪಡಿಸಿದೆ. ಎನ್‌ಡಿಎ ಕೂಟದ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಅವರಿಂದ ಈ ಮಾತು ಹೊರಬಿದ್ದಿದೆ. ವಿಧಾನಸಭೆ ಚುನಾವಣೆಗಳು ಪುನರ್‌ವಿಂಗಡಿತ ಕ್ಷೇತ್ರಗಳಲ್ಲಿ ನಡೆಯುವುದೋ ಅಥವಾ ಪ್ರಸಕ್ತ ವಿಧಾನಸಭೆ ಸ್ಥಾನಗಳ ಪ್ರಕಾರ ನಡೆಯುವುದೇ ಎಂಬ ಬಗ್ಗೆ ಗೊಂದಲ ಆವರಿಸಿರುವ ನಡುವೆ ಈ ಹೇಳಿಕೆಯು ಮಹತ್ವ ಪಡೆದಿದೆ.
ಪುನರ್‌ವಿಂಗಡಿತ ಕ್ಷೇತ್ರಗಳ ಆಧಾರದ ಮೇಲೆ ಚುನಾವಣೆ ನಡೆದರೆ ಚುನಾವಣೆ ನಡೆಸಲು ಇನ್ನಷ್ಟು ಸಮಯ ಹಿಡಿಯುತ್ತದೆ ಮತ್ತು ಕಾಂಗ್ರೆಸ್ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ತಕ್ಕಷ್ಟು ಸಮಯಾವಕಾಶ ಸಿಗುತ್ತದೆ ಎಂಬ ಭಾವನೆ ಪ್ರತಿಪಕ್ಷದ ಪಾಳೆಯದಲ್ಲಿ ವ್ಯಕ್ತವಾಗಿದೆ. ಹೆಚ್ಚು ಕಡಿಮೆ 10 ರಾಜ್ಯಗಳಲ್ಲಿ ಚುನಾವಣೆ ಗೆಲ್ಲುವುದು ಪ್ರತಿಪಕ್ಷದ ಎದುರಿಗಿರುವ ತಕ್ಷಣದ ಕ್ರಮವಾಗಿದೆ. ಕರ್ನಾಟಕ ಚುನಾವಣೆ ಕುರಿತು ಮಾತನಾಡಿದ ಆಡ್ವಾಣಿ ಅದನ್ನು ಮುಂದೂಡಲು ಯಾವುದೇ ಸಂಚು ಬೇಡ ಎಂದು ಅವರು ನುಡಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಮುಖಾಮುಖಿಯಾಗಿ ಎದುರಿಸಲು ಸಿದ್ದತೆ ಮಾಡಿಕೊಂಡಿರುವ ಪ್ರತಿಪಕ್ಷವು ಉತ್ತಮ ಆಡಳಿತ, ಅಭಿವೃದ್ದಿ ಮತ್ತು ಆಂತರಿಕ ಭದ್ರತೆ ಕುರಿತು ಕಾರ್ಯಕ್ರಮ ರೂಪಿಸಲು 9 ಮುಖ್ಯಮಂತ್ರಿಗಳ ಸಭೆಯನ್ನು ಕರೆಯಲು ನಿರ್ಧರಿಸಿದ್ದಾರೆ.
|