ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾತುಕತೆ ಫಲಪ್ರದ: ವಾಹನ ಮುಷ್ಕರ ಅಂತ್ಯ
ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಲಾರಿ ಮಾಲೀಕರು ಭಾನುವಾರದಿಂದೀಚೆಗೆ ನಡೆಸುತ್ತಿದ್ದ ಮುಷ್ಕರಕ್ಕೆ ಮಂಗಳವಾರ ರಾತ್ರಿ ತೆರೆಬಿದ್ದಿದ್ದು, ಜನತೆ ನಿಟ್ಟುಸಿರುಬಿಟ್ಟಿದ್ದಾರೆ.

ಹಳೆಯ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸಬೇಕಿಲ್ಲ, ಹೊಸದಾಗಿ ನೋಂದಣಿಯಾಗುವ ವಾಹನಗಳಿಗೆ ಇದನ್ನು ಅಳವಡಿಸುವ ಬಗ್ಗೆ ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ತೀರ್ಮಾನ ತಮ್ಮ ಸಂಘಟನೆಗಳಿಗೆ ಖುಷಿ ತಂದಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಹೇಳಿದರು.

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ತಂಗರಾಜು ನೇತೃತ್ವದಲ್ಲಿ ಮಂಗಳವಾರ ಹಲವು ಸುತ್ತಿನ ಸಂಧಾನ ಮಾತುಕತೆ ವಿಫಲಗೊಂಡರೂ, ಮಂಗಳವಾರ ರಾತ್ರಿ ವೇಳೆಗೆ ಸರ್ಕಾರ ಮತ್ತು ಸಂಘಟನೆಗಳ ಸ್ಪೀಡ್ ಗವರ್ನರ್ ಜಾರಿಗೆ ಇದ್ದ ಅಭಿಪ್ರಾಯ ಭೇದ ಕೊಂಚ ಪರಿಹಾರ ಕಂಡು ಒಮ್ಮತ ಮೂಡಲು ಕಾರಣವಾಯಿತು.

ಕಳೆದ ಮೂರು ದಿನಗಳಿಂದ ನಡೆದ ಲಾರಿ ಮುಷ್ಕರದಿಂದಾಗಿ ಜನಜೀವನದ ಮೇಲೆ ಭಾರೀ ಪರಿಣಾಮ ಉಂಟಾಗಿದ್ದು, ದಿನಸಿ ವಸ್ತುಗಳ ಲಭ್ಯತೆಯಲ್ಲಿ ವ್ಯತ್ಯಯ, ಹಣ್ಣು, ತರಕಾರಿ ಸೇರಿದಂತೆ ವಸ್ತುಗಳ ಬೆಲೆ ಗಗನಕ್ಕೇರಿತ್ತು.
ಮತ್ತಷ್ಟು
ವಿಧಾನಸಭೆ ಚುನಾವಣೆ ಮುಂದೂಡಿಕೆಗೆ ವಿರೋಧ
ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮುಂದುವರಿಕೆ
ಶ್ರೀಕೃಷ್ಣ ಪೂಜೆಗೆ ಸಹಕಾರ: ಕರಗಿತು ವಿವಾದ
ಜೆಡಿಎಸ್ ಮಡಿಲಿಗೆ ತರಲು ಬಚ್ಚೇಗೌಡರ ಭೇಟಿ
ನಿಲ್ಲದ ವಾಹನ ಮುಷ್ಕರ: ಹೆಚ್ಚುತ್ತಿರುವ ಅತೃಪ್ತಿ
ಎರಡು ಲಾರಿಗಳ ಡಿಕ್ಕಿ: ಒಬ್ಬನ ಸಾವು