ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
100 ಗಂಟೆ ಲೆಕ್ಕ ಬಿಡಿಸಿದ ಪೋರರ 'ಅಗಣಿತ' ಆಟ
ಗಣಿತ ಅಂದರೆ ಸಾಕು ಮೂಗು ಮುರಿವವರೇ ಜಾಸ್ತಿ. ಅಂತಹುದರಲ್ಲಿ 100 ಗಂಟೆಗಳ ಕಾಲ ಸತತವಾಗಿ ಗಣಿತ ಲೆಕ್ಕ ಬಿಡಿಸಿದರೆ! ಹೌದು ಇಂತಹ ಅಪೂರ್ವ ದಾಖಲೆ ನಿರ್ಮಿಸಿದವರು ಧಾರವಾಡ ವಿದ್ಯಾಕೇಂದ್ರದ ಮೂವರು ವಿದ್ಯಾರ್ಥಿಗಳಾದ ಪ್ರವೀಣ್, ಕಿರಣ್ ಹಾಗೂ ಪ್ರಜ್ವಲ್. ಈ ಮೂಲಕ ಹಿಂದೆ ತಾವೇ ನಿರ್ಮಿಸಿದ್ದ 50 ಗಂಟೆಗಳ ದಾಖಲೆಯನ್ನು ಮುರಿದಿದ್ದಾರೆ.

ಶುಕ್ರವಾರ ರಾತ್ರಿ 8 ಗಂಟೆಯ ಹೊತ್ತಿಗೆ ಗಣಿತದ ಲೆಕ್ಕ ಬಿಡಿಸಲು ಕುಳಿತ ವಿದ್ಯಾರ್ಥಿಗಳು ಪ್ರತಿ 12 ಗಂಟೆಗಳಿಗೊಮ್ಮೆ 15 ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಂಡು, ಒಬ್ಬೊಬ್ಬರು 300 ಪುಸ್ತಕಗಳಲ್ಲಿ ಸುಮಾರು 1000ಕ್ಕಿಂತಲೂ ಅಧಿಕ ಲೆಕ್ಕಗಳನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಗೆ ಮಂಗಳವಾರ ರಾತ್ರಿ 12 ಗಂಟೆಗೆ 100 ಗಂಟೆಗಳ ಅವಧಿ ಮುಗಿಯುತ್ತಿದ್ದಂತೆ ವಿದ್ಯಾಕೇಂದ್ರದ ಸುತ್ತವೆಲ್ಲಾ ಸಂಭ್ರಮದ ವಾತಾವರಣ ತುಂಬಿಕೊಂಡಿತ್ತು. ವಿದ್ಯಾರ್ಥಿಗಳೆಲ್ಲ ಕುಣಿದು ಕುಪ್ಪಳಿಸಿದರು. ಪ್ರತಿಯೊಬ್ಬರ ಮುಖದಲ್ಲಿ ಹರ್ಷ ಮನೆ ಮಾಡಿತ್ತು. ಸಾಧನೆಗೈದು ಜಗವನ್ನೇ ಗೆದ್ದ ಆನಂದದಲ್ಲಿ ಲೆಕ್ಕ ಬಿಡಿಸಿದವರಿಗೆ ನಗುವೇ ಮಾತಾಯಿತು.

ಮನಸ್ಸು ಗಟ್ಟಿ ಮಾಡಿಕೊಂಡರೆ ಸಾಕು ಯಾವುದು ಅಸಾಧ್ಯವಲ್ಲ ಎಂಬುದನ್ನೇ ಧ್ಯೇಯವಾಗಿಟ್ಟುಕೊಂಡು ಸಾಧನೆಗೆ ಇಳಿದದ್ದರಿಂದ ಇದು ಕಷ್ಟವೆನಿಸಲಿಲ್ಲ. 100 ಗಂಟೆಗಳು ಕೇವಲ 100 ನಿಮಿಷದಂತೆ ಕಳೆದು ಹೋಯಿತು ಎನ್ನುವುದು ಸಾಧನೆಗೈದ ವಿದ್ಯಾರ್ಥಿಯ ಅಭಿಪ್ರಾಯ.

ಇಂತಹ ಸಾಧನೆಯ ಆಶಯಕ್ಕೆ ವಿದ್ಯಾರ್ಥಿಗಳಿಗೆ ನೆರವಾದವರು ವಿದ್ಯಾಕೇಂದ್ರದ ಮೇಲ್ವಿಚಾರಕರಾದ ರಾಜು. ಇವರು ವಿದ್ಯಾರ್ಥಿಗಳಿಗೆ ಸತತವಾಗಿ ಅಭ್ಯಾಸ ನಡೆಸಲು ಸ್ಫೂರ್ತಿ ತುಂಬಿದರು. ಇದರಿಂದ ದಿನವೊಂದಕ್ಕೆ ಎಡೆಬಿಡದೆ 20 ಗಂಟೆಗಳ ಕಾಲ ಅಭ್ಯಾಸ ನಡೆಸಿ ದಾಖಲೆಗೆ ಪೂರ್ವ ತಯಾರಿ ನಡೆಸಿದ್ದರು. ಇಂತಹ ಅಪೂರ್ವ ಸಾಧನೆಗೈದಿರುವ ವಿದ್ಯಾರ್ಥಿಗಳಿಗೆ ಭವ್ಯ ಭವಿಷ್ಯ ಮುಂದಿದೆ.
ಮತ್ತಷ್ಟು
ಮಾತುಕತೆ ಫಲಪ್ರದ: ವಾಹನ ಮುಷ್ಕರ ಅಂತ್ಯ
ವಿಧಾನಸಭೆ ಚುನಾವಣೆ ಮುಂದೂಡಿಕೆಗೆ ವಿರೋಧ
ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮುಂದುವರಿಕೆ
ಶ್ರೀಕೃಷ್ಣ ಪೂಜೆಗೆ ಸಹಕಾರ: ಕರಗಿತು ವಿವಾದ
ಜೆಡಿಎಸ್ ಮಡಿಲಿಗೆ ತರಲು ಬಚ್ಚೇಗೌಡರ ಭೇಟಿ
ನಿಲ್ಲದ ವಾಹನ ಮುಷ್ಕರ: ಹೆಚ್ಚುತ್ತಿರುವ ಅತೃಪ್ತಿ