ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಪಾಂಚಜನ್ಯ ಮೊಳಗಿಸಲು ಕೃಷ್ಣಾಗಮನ
ರಾಜಭವನ ಬೋರ್ ಹೊಡೆಸುತ್ತಿದೆ ಅನ್ನುತ್ತಲೇ ಬಂದಿದ್ದ ಮಾಜಿ ಮುಖ್ಯಮಂತ್ರಿ, ಹಾಲಿ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ ಕೊನೆಗೂ ನಿಟ್ಟುಸಿರು ಬಿಡಲಿದ್ದಾರೆ. ಅವರನ್ನು ರಾಜ್ಯ ರಾಜಕಾರಣಕ್ಕೆ ಮರಳಿ ಕರೆಸಲು ಹೈಕಮಾಂಡ್ ಸಮ್ಮತಿ ನೀಡಿದ್ದು, ಶೀಘ್ರವೇ ಕೃಷ್ಣ ಅವರು ರಾಜ್ಯದ ಚುನಾವಣ ಕಣದಲ್ಲಿ ಕಾಂಗ್ರೆಸ್ ಸಾರಥ್ಯ ವಹಿಸಲಿದ್ದಾರೆ.

ಕೆಪಿಸಿಸಿಯೂ ಸೇರಿದಂತೆ ಪಕ್ಷದ ಎಲ್ಲಾ ಸಮಿತಿಗಳಿಗಿಂತ ಉನ್ನತ ಅಧಿಕಾರವಿರುವ ಸಮನ್ವಯ ಸಮಿತಿಗೆ ಕೃಷ್ಣರ ಮುಖಂಡತ್ವ ನೀಡಲು ಹೈಕಮಾಂಡ್ ನಿರ್ಧರಿಸಿರುವುದರಿಂದ ಕರ್ನಾಟಕದ ಸಕ್ರಿಯ ರಾಜಕಾರಣಕ್ಕೆ ಮರಳುವ ಕೃಷ್ಣರ ಇಂಗಿತಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.

ಎಲ್ಲಾ ಸಮಿತಿಗಳೂ ಕೃಷ್ಣರ ಕೈಕೆಳಗೇ ಬರುತ್ತವೆ. ಜೊತೆಗೆ ಕೃಷ್ಣರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಾದ್ದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದಿರುವುದರ ಕುರಿತು ಚಿಂತಿಸುವ ಅಗತ್ಯವಿಲ್ಲ. ಆದರೆ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಮಾತ್ರ ಹೈಕಮಾಂಡ್ ವಹಿಸಿರುವುದರಿಂದ ಕೃಷ್ಣ ಹೆಚ್ಚು ಸಕ್ರಿಯವಾಗಿ ಮತ್ತು ಉತ್ಸಾಹದಿಂದ ತೊಡಗಿಸಿಕೊಳ್ಳಲಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಕೃಷ್ಣ ಕರ್ನಾಟಕಕ್ಕೆ ಮರಳಲಿದ್ದಾರೆ.
ಮತ್ತಷ್ಟು
100 ಗಂಟೆ ಲೆಕ್ಕ ಬಿಡಿಸಿದ ಪೋರರ 'ಅಗಣಿತ' ಆಟ
ಮಾತುಕತೆ ಫಲಪ್ರದ: ವಾಹನ ಮುಷ್ಕರ ಅಂತ್ಯ
ವಿಧಾನಸಭೆ ಚುನಾವಣೆ ಮುಂದೂಡಿಕೆಗೆ ವಿರೋಧ
ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮುಂದುವರಿಕೆ
ಶ್ರೀಕೃಷ್ಣ ಪೂಜೆಗೆ ಸಹಕಾರ: ಕರಗಿತು ವಿವಾದ
ಜೆಡಿಎಸ್ ಮಡಿಲಿಗೆ ತರಲು ಬಚ್ಚೇಗೌಡರ ಭೇಟಿ