ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಚ್‌ಎಎಲ್ ಕಾರ್ಖಾನೆ ಎದುರು ನೌಕರರ ಪ್ರತಿಭಟನೆ
ಎಚ್ಎಎಲ್ ನೌಕರರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನೌಕರರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದ್ದಾರೆ.ಕಾರ್ಮಿಕರ ಹಿತಕ್ಕಾಗಿ ಸ್ಥಾಪಿಸಿರುವ ನೌಕರರ ಸಂಘದವರೇ ಕಂಪೆನಿಯ ಜೊತೆ ಸೇರಿ ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.

ನೌಕರರ ಮುಖಂಡರಾದ ವಿಶ್ವನಾಥ್ ಕೂಡ ಇದರಲ್ಲಿ ಭಾಗಿಯಾಗಿದ್ದು, ಕಾರ್ಮಿಕರ ಸೌಲಭ್ಯಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಎಚ್ಎಎಲ್ ನೌಕರರು ಆಪಾದಿಸಿದ್ದಾರೆ.

ಕಾರ್ಮಿಕರಿಗೆಂದೇ ಮೀಸಲಿಟ್ಟಿರುವ ಹಣವನ್ನು ಕಸಿದುಕೊಂಡು ಆಡಳಿತ ವರ್ಗ ಭ್ರಷ್ಟಚಾರವೆಸಗಿದೆ. ಇದನ್ನು ವಿರೋಧಿಸುವ ಬದಲು ನೌಕರರ ಸಂಘದ ಅಧಿಕಾರಿಗಳು ಅವರ ಜೊತೆ ಕೈಜೋಡಿಸಿ ಅವ್ಯವಹಾರ ನಡೆಸಿದ್ದಾರೆ ಎಂಬುದು ನೊಂದ ಕಾರ್ಮಿಕರ ಆರೋಪ.

ಪ್ರತಿಭಟನೆಯ ಸಮಯದಲ್ಲಿ ಎಚ್ಎಎಲ್ ಕಂಪೆನಿಯ ಎದುರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದ ನೌಕರರು, ವಿಶ್ವನಾಥ್ರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಕಾರ್ಮಿಕರು ಹಾಗೂ ವಿಶ್ವನಾಥ್‌ರವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಮಾಡಬೇಕಾಯಿತು.
ಮತ್ತಷ್ಟು
ವಿಪ್ರೊ ವಿರುದ್ಧ ಕಾರ್ಮಿಕರ ಪ್ರತಿಭಟನೆ
ಕಾಂಗ್ರೆಸ್ ಪಾಂಚಜನ್ಯ ಮೊಳಗಿಸಲು ಕೃಷ್ಣಾಗಮನ
100 ಗಂಟೆ ಲೆಕ್ಕ ಬಿಡಿಸಿದ ಪೋರರ 'ಅಗಣಿತ' ಆಟ
ಮಾತುಕತೆ ಫಲಪ್ರದ: ವಾಹನ ಮುಷ್ಕರ ಅಂತ್ಯ
ವಿಧಾನಸಭೆ ಚುನಾವಣೆ ಮುಂದೂಡಿಕೆಗೆ ವಿರೋಧ
ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮುಂದುವರಿಕೆ