ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
27ರಂದು ಪ್ರಕಾಶ್ ಕಾಂಗ್ರೆಸಿಗೆ: ಖರ್ಗೆ ವಿಶ್ವಾಸ
ದೇವೇಗೌಡರಿಂದ ರೋಸಿ ಹೋಗಿ ಜೆಡಿಎಸ್‌ನಿಂದ ಹೊರಬರುತ್ತಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಹಾಗೂ ಅವರ ಬೆಂಬಲಿಗರು ಈ ತಿಂಗಳ 27ರಂದು ಕಾಂಗ್ರೆಸ್ ಪಕ್ಷ ಸೇರುವುದು ಖಚಿತವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಮೂಲಕ ವಿಧಾನಸಭಾ ಚುನಾವಣೆಗೆ ರಾಜ್ಯ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಪ್ರಾರಂಭಗೊಂಡಿದೆ.

ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ವಹಿಸಿಕೊಳ್ಳುತ್ತಿರುವ ಪೃಥ್ವಿರಾಜ್ ಚೌಹಾಣ್ ಸಮ್ಮುಖದಲ್ಲಿ ಈ ತಿಂಗಳ 27ರಂದು ಪ್ರಕಾಶ್ ಬೆಂಬಲಿಗರು ಪಕ್ಷವನ್ನು ಸೇರುವ ಸಾಧ್ಯತೆಗಳಿದ್ದು, ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಬೆಂಬಲಿಗರೂ ಪಕ್ಷ ಸೇರಿಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಖರ್ಗೆ, ಪ್ರಕಾಶ್ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಸೇರುವ ಆಶಯವನ್ನು ವ್ಯಕ್ತಪಡಿಸಿದ್ದು, ಈ ಬಗ್ಗೆ ಹೈಕಮಾಂಡ್ ಜತೆ ಮಾತುಕತೆ ಅಂತಿಮ ಹಂತದಲ್ಲಿದೆ. ಷರತ್ತುಗಳಿಲ್ಲದ ಕಾಂಗ್ರೆಸ್ ಧ್ಯೇಯ-ಧೋರಣೆಗಳಿಗೆ ಅವರು ಒಪ್ಪಿದ್ದಾರೆ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದ ಬಗ್ಗೆ ವಿಶ್ವಾಸವಿಟ್ಟು ಪಕ್ಷ ಸೇರುತ್ತಿದ್ದಾರೆ ಎಂದು ಹೇಳಿದರು.

ಮುಂಬರುವ ಚುನಾವಣೆಯಲ್ಲಿ ಪಕ್ಷದಲ್ಲಿ ನಿಷ್ಠೆ ಹೊಂದಿರುವ ಹಾಗೂ ಪಕ್ಷದಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಪಕ್ಷ ಬಹುಮತವನ್ನು ಸಾಧಿಸಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮತ್ತಷ್ಟು
ಜಗ್ಗದ ದೇವೇಗೌಡರಿಂದ ಜೆಡಿಎಸ್ ಸಮಾವೇಶ
ದೇವೇಗೌಡರು ಕ್ಷಮೆ ಯಾಚಿಸಬೇಕು: ಖರ್ಗೆ
ಫಟಾಫಟ್ ಅಂಡರ್‌ಪಾಸ್‌ಗೆ ಅಂತರ್ಜಲದ ವಿಘ್ನ
ಎಚ್‌ಎಎಲ್ ಕಾರ್ಖಾನೆ ಎದುರು ನೌಕರರ ಪ್ರತಿಭಟನೆ
ಮಹಿಳೆಯೊಬ್ಬಳ ಭೀಕರ ಕೊಲೆ: ನಗ ನಾಣ್ಯ ಲೂಟಿ
ಕಾಂಗ್ರೆಸ್ ಪಾಂಚಜನ್ಯ ಮೊಳಗಿಸಲು ಕೃಷ್ಣಾಗಮನ