ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಎಂದು ಹೇಳಿರುವ ದೇವೇಗೌಡರ ಕುರಿತು ಕನ್ನಡ ಸಂಘ ಸಂಸ್ಥೆಗಳು ಯಾವುದೇ ಪ್ರತಿಕ್ರಿಯೆ ನೀಡದಿರುವುದರ ಕುರಿತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.
ಇಂಥ ಅವಮಾನಕರ ಹೇಳಿಕ ನೀಡಿದ ನಂತರವೂ ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್‌ರಂತಹ ಕನ್ನಡ ನಾಯಕರು, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಇತರ ಕನ್ನಡ ಸಂಘ ಸಂಸ್ಥೆಗಳು ಯಾವುದೇ ಹೇಳಿಕೆ ನೀಡದಿರುವುದನ್ನು ನೋಡಿದರೆ ಏನೋ ಸಂಶಯ ಬರುತ್ತದೆ, ಇದರಲ್ಲೇನೋ ಮಸಲತ್ತಿದೆ ಎನಿಸುತ್ತದೆ ಎಂದು ನುಡಿದ ಶಿವಕುಮಾರ್ ಈ ಸಂಘಸಂಸ್ಥೆಗಳು ಬೀಗ ಹಾಕಿಕೊಳ್ಳುವುದು ಒಳ್ಳೆಯದು ಎಂದು ಪ್ರತಿಕ್ರಿಯಿಸಿದ್ದಾರೆ.
ದೇವೇಗೌಡರ ಈ ಹೇಳಿಕೆಯ ಕುರಿತು ಖ್ಯಾತ ಸಾಹಿತಿ ಯು.ಆರ್.ಅನಂತ ಮೂರ್ತಿಯವರು ಮಾತನಾಡುತ್ತಾ, ಇದಕ್ಕೆ ಇಷ್ಟೊಂದು ಪ್ರಾಮುಖ್ಯತೆ ನೀಡುವ ಅಗತ್ಯವಿರಲಿಲ್ಲ. ಗೌಡರು ಏನೋ ನೋವಿನಲ್ಲಿ ಈ ಮಾತುಗಳನ್ನಾಡಿರಬಹುದು. ಈಗಾಗಲೇ ಇದನ್ನು ಸಾಕಷ್ಟು ದೊಡ್ಡದು ಮಾಡಲಾಗಿದೆ. ಅದನ್ನೇ ಮತ್ತಷ್ಟು ದೊಡ್ಡದು ಮಾಡುವುದು ಅಗತ್ಯವಿಲ್ಲ. ಅವರ ಕುರಿತು ನಮಗೊಂದು ಗೌರವವಿರಬೇಕು. ಅವರನ್ನು ಬೇಕಿದ್ದರೆ ಕ್ರಿಟಿಸೈಸ್ ಮಾಡೋಣ, ಆದರೆ ತೇಜೋವಧೆ ಮಾಡುವುದು ಬೇಡ ಎಂದು ಪ್ರತಿಕ್ರಿಯಿಸಿದ್ದಾರೆ.
|