ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೋಗೋರು ಹೋಗ್ಲಿ, ಬರೋರು ಬರ್ಲಿ: ದೇವೇಗೌಡ
NRB
ಪಕ್ಷಕ್ಕೆ ಯಾರು ಬೇಕಾದ್ರೂ ಬರಬಹುದು, ಪಕ್ಷದಿಂದ ಯಾರು ಬೇಕಾದ್ರೂ ಹೋಗಬಹುದು. 24 ಮಾಜಿ ಶಾಸಕರು ಪಕ್ಷ ಬಿಟ್ಟ ಮಾತ್ರಕ್ಕೆ ನನಗೇನೂ ತೊಂದರೆಯಿಲ್ಲ. ನಾನೇ ನಿಂತು ಪಕ್ಷ ಕಟ್ಟುತ್ತೇನೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಭಿನ್ನಮತೀಯರಿಗೆ ಬಹಿರಂಗವಾಗಿ ಸಡ್ಡು ಹೊಡೆದಿದ್ದಾರೆ.

ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾರ್ಯಕರ್ತರ ಸಭೆ-ಸಮಾವೇಶಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದ ಎಲ್ಲ ಭಾಗಗಳಲ್ಲಿ ಪ್ರವಾಸ ಮಾಡಿ ಅಧ್ಯಯನ ಮಾಡಿದ ನಂತರ ಯಾರಿಗೆ ಈ ಬಾರಿಯ ಚುನಾವಣೆಗೆ ಟಿಕೆಟ್ ನೀಡಬೇಕೆಂದು ನಿರ್ಧರಿಸುವೆ ಎಂದು ತಿಳಿಸಿದರು.

ರಾಜ್ಯದಲ್ಲಿ ರಾಷ್ಟ್ರಪತಿಗಳ ಆಳ್ವಿಕೆ ಪ್ರಾರಂಭವಾಗಿ ಸಾಕಷ್ಟು ದಿನಗಳೇ ಆಗಿ ಹೋಗಿವೆ. ಮೇ 28ರೊಳಗಾಗಿ ವಿಧಾನಸಭಾ ಚುನಾವಣೆಗಳು ನಡೆಯದಿದ್ದಲ್ಲಿ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಈ ಸಂದರ್ಭದಲ್ಲಿ ಅವರು ಎಚ್ಚರಿಕೆಯನ್ನೂ ನೀಡಿದರು.

ಇದುವರೆಗಿನ ತಮ್ಮ ರಾಜಕೀಯ ಜೀವನದಲ್ಲಿ ತಮಗಾಗಿರುವ ಎಲ್ಲ ರೀತಿಯ ಅನುಭವಗಳನ್ನೂ ಎಲ್ಲ ಭಾಷೆಗಳಲ್ಲಿ ಕಿರುಹೊತ್ತಿಗೆಯ ರೂಪದಲ್ಲಿ ತರುವುದಾಗಿಯೂ ಈ ಸಂದರ್ಭದಲ್ಲಿ ಗೌಡರು ತಿಳಿಸಿದರು.
ಮತ್ತಷ್ಟು
ಯಡಿಯೂರಪ್ಪ ಪ್ರಶ್ನಾತೀತ ನಾಯಕ: ನಾಯ್ಡು
ಗುಂಪು ಗಲಭೆ: ಉಲ್ಲಾಳದಲ್ಲಿ ಉದ್ರಿಕ್ತ ಸ್ಥಿತಿ
ಕನ್ನಡ ಸಂಘ ಸಂಸ್ಥೆಗಳು ಬೀಗ ಹಾಕಲಿ: ಡಿಕೆಶಿ
ನೈಸ್‌ಗೆ ಜಲಮಂಡಳಿ ಅಸಹಕಾರ: ಹೈಕೋರ್ಟ್ ತರಾಟೆ
ಬಂಗಾರಪ್ಪ ಕಾಂಗ್ರೆಸ್‌ಗೆ: ವದಂತಿಗೆ ರೆಕ್ಕೆ ಪುಕ್ಕ
ಮಾ.28: ದೇವನಹಳ್ಳಿ ವಿಮಾನನಿಲ್ದಾಣ ಪ್ರಧಾನಿ ಲೋಕಾರ್ಪಣೆ