ಗ್ರಾನೈಟ್ ಕಲ್ಲುಗಳನ್ನು ಲಾರಿಯಿಂದ ಇಳಿಸುತ್ತಿದ್ದ ಸಂದರ್ಭದಲ್ಲಿ ಅವು ಮೈಮೇಲೆ ಬಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು (ಗುರುವಾರ) ನಡೆದಿದೆ.ಆಕಸ್ಮಿಕವಾಗಿ ನಡೆದ ಈ ಘಟನೆಯಲ್ಲಿ ರಾಜಸ್ತಾನ ಮೂಲದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಇನ್ನೊಬ್ಬ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕೆಂಪೇಗೌಡ ನಗರ ಸರ್ಕಾರಿ ಪ್ರೌಢಶಾಲೆ ಸಮೀಪ ನಾಗರಾಜ ಎಂಬುವವರು ನಿರ್ಮಿಸುತ್ತಿರುವ ಮನೆಗೆ ಗ್ರಾನೈಟನ್ನು ರಾಜಸ್ಥಾನದಿಂದ ಲಾರಿಯಲ್ಲಿ ತುಂಬಿಕೊಂಡು ತರಲಾಗಿತ್ತು.
ನಾಲ್ಕು ಜನ ಕಾರ್ಮಿಕರು ಗ್ರಾನೈಟ್ ಕಲ್ಲುಗಳನ್ನು ಇಳಿಸುತ್ತಿದ್ದ ಸಂದರ್ಭದಲ್ಲಿ ಲಾರಿ ಒಂದು ಕಡೆ ವಾಲಿದ್ದರಿಂದ ಅದರಲ್ಲಿದ್ದ ಗ್ರಾನೈಟ್‌ಗಳು ಕೆಳಗೆ ಜಾರಿ ಬಿತ್ತು. ಇಬ್ಬರು ಅದರಿಂದ ತಪ್ಪಿಸಿಕೊಂಡರಾದರೂ ಇನ್ನಿಬ್ಬರು ಅದರಡಿಗೆ ಸಿಕ್ಕ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ನಾಗರಾಜು ಪೊಲೀಸರಿಗೆ ಪ್ರಕರಣವನ್ನು ತಿಳಿಸಿದ್ದು, ಈ ಕುರಿತು ಪೊಲೀಸರು ಈಗಾಗಲೇ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
|