ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣರಾಜ್ಯೋತ್ಸವ ಸಮಾರಂಭ: ಭದ್ರತೆಗೇ ಆದ್ಯತೆ
ನಾಳೆ (ಶನಿವಾರ) ಗಣರಾಜ್ಯೋತ್ಸವ. ಭಯೋತ್ಪಾದಕರು ದೇಶದ ಭದ್ರತೆ-ಸಮಗ್ರತೆಗಳನ್ನು ಒಡೆಯಲು ಆಯ್ದುಕೊಳ್ಳುವುದು ಇಂಥ ಸನ್ನಿವೇಶಗಳನ್ನೇ ಆಗಿರುವುದರಿಂದ ಗಣರಾಜ್ಯೋತ್ಸವ ಸಮಾರಂಭ ನಡೆಯಲಿರುವ ನಗರದ ಮಾಣೆಕ್ ಷಾ ಮೈದಾನದಲ್ಲಿ ಬಿಗಿಭದ್ರತೆಯನ್ನು ಕಲ್ಪಿಸಲಾಗಿದೆ.

ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ವೀಕ್ಷಿಸಬಯಸುವ ಸಾರ್ವಜನಿಕರು 8.30ರ ಒಳಗೇ ಮೈದಾನ ಪ್ರವೇಶಿಸಬೇಕು ಎಂಬ ನಿಬಂಧನೆ ವಿಧಿಸಲಾಗಿದೆ.

ಭದ್ರತಾ ಕಾರಣಗಳಿಗಾಗಿ ಆಹ್ವಾನಿತರಾಗಲೀ, ಸಾರ್ವಜನಿಕರಾಗಲೀ ಮೊಬೈಲ್, ಇಲೆಕ್ಟ್ರಾನಿಕ್ ವಸ್ತುಗಳು, ಕೊಡೆ, ಕ್ಯಾಮೆರಾ ಅಷ್ಟೇ ಏಕೆ ನೀರಿನ ಬಾಟಲಿಗಳನ್ನೂ ಮೈದಾನದ ಒಳಗಡೆ ಕೊಂಡೊಯ್ಯುವಂತಿಲ್ಲ.

ಕಾರ್ಯಕ್ರಮ ನಡೆಯುವ ವೇಳೆ ಉಂಟಾಗಬಹುದಾದ ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಈಗಾಗಲೇ ಸಂಚಾರಿ ಮಾರ್ಗಸೂಚಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಬಿಆರ್‌ವಿ ಪೆರೇಡ್ ಮೈದಾನದಲ್ಲಿ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ನಡೆಯುವ ಸಾಂಸ್ಕ್ಕತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವಾಗುವಂತೆ ಸೂಕ್ತ ವ್ಯವಸ್ಥೆ ಮಾಡುವುದರ ಜೊತೆಗೇ ವಿಪತ್ತು ನಿರ್ವಹಣಾ ಘಟಕವನ್ನೂ ವ್ಯವಸ್ಥೆ ಮಾಡಿರುವುದು ಮತ್ತೊಂದು ವಿಶೇಷ. ಹೃದ್ರೋಗ ತಜ್ಞರು, ಮಕ್ಕಳ ತಜ್ಞರೂ ಸೇರಿದಂತೆ ಆಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು
ವಿಲೀನಕ್ಕೆ ವಿರೋಧ: ಇಂದು ಬ್ಯಾಂಕ್ ಬಂದ್
ತೇಜಸ್ವಿನಿ ಸಭೆಯಲ್ಲಿ ಕರವೇ ಪ್ರತಿಭಟನೆ
ಗ್ರಾನೈಟ್ ಕಲ್ಲು ಬಿದ್ದು ಇಬ್ಬರ ಸಾವು
ಹೋಗೋರು ಹೋಗ್ಲಿ, ಬರೋರು ಬರ್ಲಿ: ದೇವೇಗೌಡ
ಯಡಿಯೂರಪ್ಪ ಪ್ರಶ್ನಾತೀತ ನಾಯಕ: ನಾಯ್ಡು
ಗುಂಪು ಗಲಭೆ: ಉಲ್ಲಾಳದಲ್ಲಿ ಉದ್ರಿಕ್ತ ಸ್ಥಿತಿ