ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್‌‌ನತ್ತ ಮೂಲ ಕಾಂಗ್ರೆಸ್ಸಿಗರ ವಲಸೆ: ದತ್ತಾ
ಮಾಜಿ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದರಿಂದಾಗಿ ಅಲ್ಲಿನ ಮೂಲ ಕಾಂಗ್ರೆಸ್ಸಿಗರಲ್ಲಿ ಅಭದ್ರತೆಯ ಭಾವನೆ ಉಂಟಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತಾ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಪಕ್ಷದಲ್ಲಿ ಮೂಲೆಗುಂಪಾಗುವುದಕ್ಕೆ ಮುಂಚೆಯೇ ಸೂಕ್ತ ಜಾಗವನ್ನು ಹುಡುಕಿಕೊಳ್ಳುವ ದಿಸೆಯಲ್ಲಿ ಹೀಗೆ ಗೊಂದಲಕ್ಕೊಳಗಾಗಿರುವ ಕೆಲ ಮೂಲ ಕಾಂಗ್ರೆಸ್ಸಿಗರು ಸದ್ಯದಲ್ಲಿಯೇ ಜಾತ್ಯತೀತ ಜನತಾದಳ ಪಕ್ಷವನ್ನು ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ತಾವು ಹುಟ್ಟಬಾರದಿತ್ತೆನ್ನುವ ದೇವೇಗೌಡರ ಹೇಳಿಕೆಗೆ ಕೆಲವೊಂದು ಶಕ್ತಿಗಳು ವಿನಾಕಾರಣ ಹೊಸ ಅರ್ಥವನ್ನು ಕಲ್ಪಿಸುತ್ತಿವೆ ಎಂದು ಅಭಿಪ್ರಾಯ ಪಟ್ಟ ದತ್ತಾ, ಗೌಡರು ದೇಶದ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಾಗ ಅವರಿಗೆ ಅರ್ಹತೆ ಇಲ್ಲ, ಇಂಗ್ಲಿಷ್-ಹಿಂದಿ ಬರುವುದಿಲ್ಲ ಎಂದು ಕೀಳಾಗಿ ಕಂಡಿದ್ದರು. ಈಗ ಎಸ್ಎಂಎಸ್ ಮೂಲಕ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮತ್ತಷ್ಟು
ಪೌರಸಂಸ್ಥೆಗಳ ಮೀಸಲು ಪಟ್ಟಿ ಪ್ರಕಟ
ಗಣರಾಜ್ಯೋತ್ಸವ ಸಮಾರಂಭ: ಭದ್ರತೆಗೇ ಆದ್ಯತೆ
ವಿಲೀನಕ್ಕೆ ವಿರೋಧ: ಇಂದು ಬ್ಯಾಂಕ್ ಬಂದ್
ತೇಜಸ್ವಿನಿ ಸಭೆಯಲ್ಲಿ ಕರವೇ ಪ್ರತಿಭಟನೆ
ಗ್ರಾನೈಟ್ ಕಲ್ಲು ಬಿದ್ದು ಇಬ್ಬರ ಸಾವು
ಹೋಗೋರು ಹೋಗ್ಲಿ, ಬರೋರು ಬರ್ಲಿ: ದೇವೇಗೌಡ