ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕ್ ಮುಷ್ಕರ: ಗ್ರಾಹಕರ ಪರದಾಟ
ಭಾರತೀಯ ಸ್ಟೇಟ್ ಬ್ಯಾಂಕ್ ಅಡಿಯಲ್ಲಿರುವ ಎಲ್ಲಾ ಬ್ಯಾಂಕ್‌ಗಳ ನ್ನೂ ವೀಲೀನಗೊಳಿಸುವ ಪ್ರಸ್ತಾವನೆಯನ್ನು ವಿರೋಧಿಸಿ ಇಂದು (ಶುಕ್ರವಾರ) ಹಮ್ಮಿಕೊಳ್ಳಲಾಗಿದ್ದ ಮುಷ್ಕರದಿಂದಾಗಿ ಬ್ಯಾಂಕ್ ವಹಿವಾಟಿಗೆ ತೀವ್ರ ಅಡ್ಡಿಯುಂಟಾಯಿತು.

ನಗರದ ಮೈಸೂರು ಬ್ಯಾಂಕ್ ಕೇಂದ್ರ ಕಚೇರಿ ಮುಂದೆ ಜಮಾವಣೆಗೊಂಡ ಸಾವಿರಾರು ಮಂದಿ ಸಿಬ್ಬಂದಿ ಧರಣಿ ನಡೆಸಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದ್ದಲ್ಲದೇ ಅವು ಈಡೇರದಿದ್ದರೆ ಹೋರಾಟ ಇನ್ನೂ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಇಂದು ಮುಷ್ಕರವಿದೆಯೆಂಬ ಮಾಹಿತಿಯಿರದ ಬಹಳಷ್ಟು ಗ್ರಾಹಕರು ಬ್ಯಾಂಕ್‌ಗಳಿಗೆ ಹೋಗಿ ಅಸಮಾಧಾನದಿಂದ ಹಿಂದಿರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದರ ಜೊತೆಗೆ ನಾಳೆ ಗಣ ರಾಜ್ಯೋತ್ಸವ ಮತ್ತು ನಾಡಿದ್ದು ಭಾನುವಾರ ಆಗಿರುವುದರಿಂದ ಸೋಮವಾರದವರೆಗೆ ತಮ್ಮ ಬ್ಯಾಂಕ್ ವಹಿವಾಟಿಗೆ ತೊಂದರೆಯಾಗಲಿದೆ ಎಂಬುದನ್ನು ತಡವಾಗಿ ಅರಿತ ಕೆಲ ಗ್ರಾಹಕರು ಬೇಸರಪಟ್ಟುಕೊಳ್ಳುತ್ತಿದ್ದುದೂ ಕಂಡುಬಂತು.

ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ, ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ನಿಲ್ಲಿಸುವುದು, ವೇತನ ಪರಿಷ್ಕರಣೆಯೂ ಸೇರಿದಂತೆ ತಮ್ಮ ಹಲವು ಬೇಡಿಕೆಗಳು ಈಡೇರಬೇಕು ಎಂಬುದು ಸಿಬ್ಬಂದಿಗಳ ಒತ್ತಾಯವಾಗಿತ್ತು. ಕಳೆದ ಮಾರ್ಚ್‌ನಲ್ಲಿ ಮುಷ್ಕರ ನಡೆಸಿದಾಗ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಅದರಂತೆ ನಡೆದುಕೊಳ್ಳದಿರುವುದರ ಕುರಿತೂ ಮುಷ್ಕರದಲ್ಲಿ ಖಂಡನೆ ಕೇಳಿ ಬಂತು.




ಮತ್ತಷ್ಟು
ಬೇಡಿಕೆಗಳಿಗೆ ಒತ್ತಾಯಿಸಿ ಭಾನುವಾರ ರೈಲು ಬಂದ್
ಮಹಿಳೆಯ ಸಾವು: ಇಂದಿರಾನಗರ ಉದ್ವಿಗ್ನ
ಕೆಂಪಮ್ಮ ಕೊಲೆಯ ಸರಮಾಲೆಗೆ ಮತ್ತೊಂದು ಮಣಿ
ಜೆಡಿಎಸ್‌‌ನತ್ತ ಮೂಲ ಕಾಂಗ್ರೆಸ್ಸಿಗರ ವಲಸೆ: ದತ್ತಾ
ಪೌರಸಂಸ್ಥೆಗಳ ಮೀಸಲು ಪಟ್ಟಿ ಪ್ರಕಟ
ಗಣರಾಜ್ಯೋತ್ಸವ ಸಮಾರಂಭ: ಭದ್ರತೆಗೇ ಆದ್ಯತೆ